BIRTHDAY ಗೆ ದುಬೈ ಗೆ ಕರೆದುಕೊಂಡು ಹೋಗದ್ದಕ್ಕೆ ಪತಿಯನ್ನು ಗುದ್ದಿ ಗುದ್ದಿ ಕೊಂದ ಪತ್ನಿ!
Sunday, November 26, 2023
ಪುಣೆ: ಹುಟ್ಟುಹಬ್ಬಕ್ಕೆ ಉಡುಗೊರೆ ನೀಡದ ಪತಿಯನ್ನು ಗುದ್ದಿ ಗುದ್ದಿ ಪತ್ನಿ ಕೊಂದ ಘಟನೆ ನಡೆದಿದೆ.
ಹುಟ್ಟುಹಬ್ಬದ ಅಂಗವಾಗಿ ದುಬೈಗೆ ಪ್ರವಾಸಕ್ಕೆ ಕರೆದೊಯ್ಯದ ಪತಿಯ ಮೂಗಿಗೆ ಗುದ್ದಿ ಪತ್ನಿಯೇ ಆತನ ಸಾವಿಗೆ ಕಾರಣವಾದ ಘಟನೆ ಪುಣೆಯಲ್ಲಿ ನಡೆದಿದೆ.
ನಿಖಿಲ್ ಖನ್ನಾ ಹೆಂಡತಿಯ ಏಟಿಗೆ ಮೃತಪಟ್ಟ ದುರ್ದೈವಿ. ಹುಟ್ಟುಹಬ್ಬಕ್ಕೆ ದುಬೈಗೆ ಪ್ರವಾಸ ಕರೆದುಕೊಂಡು ಹೋಗಲಿಲ್ಲ ಎಂಬ ಕಾರಣಕ್ಕಾಗಿ ನಿಖಿಲ್ ಹಾಗೂ ಪತ್ನಿ ರೇಣುಕಾ ನಡುವೆ ಜಗಳವಾಗಿತ್ತು. ಈ ಜಗಳದ ವೇಳೆ, ಪತ್ನಿ ರೇಣುಕಾ ಪತಿಯ ಮೂಗಿಗೆ ಜೋರಾಗಿ ಗುದ್ದಿದ್ದಾರೆ. ಇದರಿಂದ 36 ವರ್ಷದ ನಿಖಿಲ್ ಖನ್ನಾ ಮುಂದಿನ ಹಲ್ಲುಗಳು ಉದುರಿವೆ. ಜತೆಗೆ, ಅವರ ಮೂಗು ಬಾಯಲ್ಲಿ ರಕ್ತ ಸೋರಿ ಅವರು ಸ್ಥಳದಲ್ಲೇ
ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅಲ್ಲದೆ, ಅಲ್ಲೇ ಕೊನೆಯುಸಿರೆಳೆದಿದ್ದಾರೆ.
ಪುಣೆಯ ವನವಡಿ ಬಡಾವಣೆಯಲ್ಲಿ ರುವ ದಂಪತಿಯ ನಿವಾಸದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಆರು ವರ್ಷಗಳ ಹಿಂದೆ, ರಿಯಲ್ ಎಸ್ಟೇಟ್ ಉದ್ಯಮಿ ನಿಖಿಲ್ ಖನ್ನಾ ಅವರು 38 ವರ್ಷದ ರೇಣುಕಾ ಅವರನ್ನು ಪ್ರೀತಿಸಿ, ವಿವಾಹವಾಗಿದ್ದರು.
ಪೊಲೀಸರು ರೇಣುಕಾ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿ ದ್ದಾರೆ. ಹೆಚ್ಚಿನ ತನಿಖೆಗಾಗಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.