-->
ಡ್ರಗ್ಸ್‌ಗಾಗಿ ಮಕ್ಕಳ ಮಾರಿದ ದಂಪತಿ!

ಡ್ರಗ್ಸ್‌ಗಾಗಿ ಮಕ್ಕಳ ಮಾರಿದ ದಂಪತಿ!

ಮುಂಬಯಿ: ಮಾದಕವಸ್ತು ಖರೀದಿಸುವುದಕ್ಕಾಗಿ ತಿಂಗಳ ಹಸುಗೂಸು ಹಾಗೂ 2 'ವರ್ಷದ ಮಗನನ್ನು ಮಾರಾಟ ಮಾಡಿರುವ ದಂಪತಿ ಸೇರಿ ಮೂವರನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ.

 1 ತಿಂಗಳ ಮಗುವನ್ನು ರಕ್ಷಿಸಲಾಗಿದ್ದು, ಮಾರಾಟವಾದ ಮತ್ತೊಂದು ಮಗುವಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. 

ಮುಂಬಯಿ ಕೈಂಬ್ರಾಂಚ್ ಮಾಹಿತಿಯ ಪ್ರಕಾರ, ಅಂಧೇರಿ ನಿವಾಸಿಗಳಾದ ಶಬೀರ್ ಹಾಗೂ ಸಾನಿಯಾ ಖಾನ್ ಎಂಬ ದಂಪತಿ ಮಾದಕವ್ಯಸನಿಗಳಾಗಿದ್ದರು. ಮಾದಕವಸ್ತು ಖರೀದಿಸುವುದಕ್ಕಾಗಿ ಶಕೀಲ್ ಮಕ್ರಾನಿ ಎಂಬವನ ಜತೆ ಸೇರಿ 2 ವರ್ಷದ ಗಂಡು ಮಗುವನ್ನು 60 ಸಾವಿರ ರೂ.ಗೆ, 1 ತಿಂಗಳ ಹೆಣ್ಣು ಮಗುವನ್ನು 14,000 ರೂ.ಗೆ ಮಾರಾಟ ಮಾಡಿದ್ದಾರೆ.

 ಕುಟುಂಬಸ್ಥರಿಗೆ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ಬೆಳಕಿಗೆ ಬಂದಿದೆ.

Ads on article

Advertise in articles 1

advertising articles 2

Advertise under the article