Mangalore- ಲಾಡ್ಜ್ ರೂಂ ಗೆ ಬೆಂಕಿ- ಯುವಕ ಜೀವಂತ ದಹನ
Thursday, November 23, 2023
ಮಂಗಳೂರು: ,ನಗರದ ಕಂಕನಾಡಿಯಲ್ಲಿ ಲಾಡ್ಜ್ ರೂಂನ ಬೆಡ್ ಗೆ ಬೆಂಕಿ ತಗುಲಿ ಯುವಕನೊಬ್ಬ ಜೀವಂತ ದಹನವಾದ ಘಟನೆ ನಡೆದಿದೆ.
ಬೆಂದೂರ್ ವೆಲ್ ನಿವಾಸಿ ಯಶ್ ರಾಜ್ ಸುವರ್ಣ (43) ಮೃತಪಟ್ಟವರು. ಮಂಗಳೂರಿನ ಕಂಕನಾಡಿಯ ರೆಸಿಡೆನ್ಸಿ ಗೇಟ್ ಲಾಡ್ಜ್ ನಲ್ಲಿ ರಾತ್ರಿ ಈ ಘಟನೆ ನಡೆದಿದೆ. ಲಾಡ್ಜ್ ರೂಂ ನಲ್ಲಿ ಬೆಡ್ ಮೇಲೆ ಮಲಗಿದ್ದ ಬೆಂದೂರ್ ವೆಲ್ ನಿವಾಸಿ ಯಶ್ ರಾಜ್ ಸುವರ್ಣ (43) ಜೀವಂತ ದಹನವಾಗಿ ಸಾವನ್ನಪ್ಪಿದ್ದಾರೆ.
ಯಶ್ ರಾಜ್ ಸುವರ್ಣ ನವೆಂಬರ್ 15 ರಿಂದ ಹೋಟೆಲ್ ನಲ್ಲಿ ವಾಸವಿದ್ದರು.ನಿನ್ನೆ ರಾತ್ರಿ ಊಟ ಮುಗಿಸಿ ರೂಂ ಗೆ ಹೋಗಿದ್ದರು. ರಾತ್ರಿ 12 ಗಂಟೆ ಹೊತ್ತಿಗೆ ರೂಂ ನಿಂದ ಹೊಗೆ ಕಾಣಿಸಿಕೊಂಡಿದೆ. ಬಳಿಕ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು. ಈ ವೇಳೆ ಯಶ್ ರಾಜ್ ಸುವರ್ಣ ಬೆಂಕಿ ತಗುಲಿ ಸಾವನ್ನಪ್ಪಿದ್ದಾರೆ. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.