ಅಮ್ಮ ನನ್ನನ್ನು ಪರಪುರುಷರೊಂದಿಗೆ ಮಲಗುವಂತೆ ಮಾಡಿದಳು, ಅಕ್ಕ ಭಿಕಾರಿ ಮಾಡಿದಳು: ಜೀವನದ ದುರ್ಬರ ದಿನಗಳನ್ನು ನೆನಪಿಸಿದ ಶಕೀಲಾ
Friday, November 3, 2023
ಹೈದರಾಬಾದ್: ಮಾಜಿ ನೀಲಿ ಸಿನಿಮಾ ತಾರೆ ಶಕೀಲಾ, ಇಂದಿಗೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವ ಶಕೀಲಾ ಕಿರುತೆರೆ ಸೇರಿದಂತೆ ಯೂಟ್ಯೂಬ್‌ನಲ್ಲಿಯೂ ಸರಣಿ ಸಂದರ್ಶನಗಳನ್ನು ನೀಡುತ್ತಲೇ ಇರುತ್ತಾರೆ. ಇದೀಗ ತಮ್ಮ ಜೀವನದಲ್ಲಿನ ಕೆಟ್ಟ ಗಳಿಗೆಯನ್ನು ಮತ್ತೆ ರಿವಿಲ್ ಮಾಡಿದ್ದಾರೆ.
ಒಂದು ಕಾಲದಲ್ಲಿ ಸೌತ್ ಇಂಡಿಯಾ ಸಿನಿಮೋದ್ಯಮವನ್ನೇ ಆಳಿದ್ದ ಶಕೀಲಾ, ಸ್ಟಾರ್ ನಟರಿಗೇ ಪೈಪೋಟಿ ನೀಡಿದ್ದರು.80- 90ರ ದಶಕದಲ್ಲಿ ಇವರ ವಯಸ್ಕರ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದರೆ, ಮಲಯಾಳಂನ ಘಟಾನುಘಟಿ ನಟರಾದ ಮಮ್ಮುಟ್ಟಿ, ಮೋಹನ್‌ಲಾಲ್ ಸಿನಿಮಾಗಳೇ ಪೋಸ್ಟ್‌ಪೋನ್ ಆಗುತ್ತಿದ್ದವು. ಇಂತಹ ಶಕೀಲಾ ಬದುಕು ಮಾತ್ರ ಹೂವಿನ ಹಾಸಿಗೆಯಾಗಿರಲಿಲ್ಲ. ಮೇಲ್ನೋಟಕ್ಕೆ ಸ್ಟಾರ್ ನಟಿಯೆನಿಸಿದ್ದರೂ, ಆಕರ ಮಾನಸಿಕವಾಗಿ ನೆಮ್ಮದಿಯಿಂದ ಇರಲಿಲ್ಲ. ಹಣ ಗಳಿಸಬೇಕೆಂಬ ಒಂದೇ ಕಾರಣಕ್ಕೆ, ವಯಸ್ಕ ಸಿನಿಮಾಗಳಲ್ಲಿಯೇ ನಟಿಸಿದರು. ಅಷ್ಟೇ ಚೆನ್ನಾಗಿ ಹಣವನ್ನೂ ಗಳಿಸಿದರು. ಅದೆಲ್ಲವೂ ನಟಿಯ ಕೈ ಸೇರಿತೇ ಎಂದರೆ, ಇಲ್ಲ ಎಂದು ಸ್ವತಃ ಶಕೀಲಾ ಹೇಳಿಕೊಂಡಿದ್ದಾರೆ.
ಆ ಕಾಲದಲ್ಲಿ ಶಕೀಲಾಗೆ ಹಣದ ಹೊಳೆಯೇ ಹರಿದು ಬರುತ್ತಿತ್ತು. ಒಂದು ಸಿನಿಮಾಕ್ಕೆ ಲಕ್ಷಾಂತರ ರೂಪಾಯೊ ಸಂಭಾವನೆ ಇವರ ಕೈ ಸೇರುತ್ತಿತ್ತು. ಹಾಗಾದರೆ, ಅಂದು ದುಡಿದ ದುಡ್ಡು ಎಲ್ಲಿ ಹೋಯಿತು? ಆ ದುಡ್ಡು ಶಕೀಲಾ ಅವರ ಅಕ್ಕನ ಬಳಿ ಇದೆ. ಏಕೆಂದರೆ, ಆ ದಿನಗಳಲ್ಲಿ ಶಕೀಲಾರ ಅಕೌಂಟ್ ನಿರ್ವಹಣೆ ಮಾಡುತ್ತಿದ್ದದ್ದೇ ಅವರ ಅಕ್ಕ ಅಂತೆ. ಸಹೋದರಿ ಮೇಲಿನ ಅತಿಯಾದ ನಂಬಿಕೆಯಿಂದಲೇ ಯಾವತ್ತೂ ಲೆಕ್ಕ ಕೇಳದ ಶಕೀಲಾ, ಆ ದಿನಗಳಲ್ಲಿಯೇ ಮನೆಯವರಿಂದಲೇ ಮೋಸ ಹೋಗಿದ್ದಳು. ಹಾಗೆ ಬಂದ ಹಣವನ್ನೆಲ್ಲ ತನ್ನ ಒಡಹುಟ್ಟಿದ ಅಕ್ಕನೇ ನುಂಗಿದ್ದಳು. ಈ ವಿಚಾರವನ್ನೆಲ್ಲ ತಮ್ಮ ಬಯೋಗ್ರಾಫಿಯಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ಬಯೋಗ್ರಾಫಿಯಲ್ಲಿ ಈ ಘಟನೆ ಉಲ್ಲೇಖಿಸಿದ ಶಕೀಲಾ ಅಡಲ್ಟ್ ಸಿನಿಮಾ ಲೋಕಕ್ಕೆ ಬರಲು ತನ್ನ ತಾಯಿಯೇ ನೇರ ಕಾರಣ. ಮನೆಯಲ್ಲಿ ಹಣಕಾಸಿನ ಸಮಸ್ಯೆಯಿದ್ದ ಕಾರಣಕ್ಕೆ, ಪರಪುರುಷನೊಂದಿಗೆ ಮಲಗುವಂತೆ ಹೇಳಿದ್ದೂ ಅಮ್ಮನೇ ಎಂದಿದ್ದಾರೆ.
ತಾಯಿ ಕಣ್ಣಿಗೆ ತನ್ನ ಎಲ್ಲ ಮಕ್ಕಳೂ ಒಂದೇ. ಆದರೆ ಚಿಕ್ಕಂದಿನಿಂದಲೇ ನನ್ನನ್ನು ಬೇರೆ ರೀತಿಯಲ್ಲಿಯೇ ಟ್ರೀಟ್ ಮಾಡುತ್ತಿದ್ದಳು ನನ್ನಮ್ಮ. ಅದು ನನ್ನ ಗಮನಕ್ಕೂ ಬಂದಿತ್ತು. ಕೈತುಂಬ ಹಣ ಗಳಿಸುತ್ತಿರುವಾಗಲೂ ಅದು ಹಾಗೆಯೇ ಮುಂದುವರಿದಿತ್ತು. ನಾನು ಆಗಿನ್ನೂ ಸಿನಿಮಾಕ್ಕೆ ಬಂದಿರಲಿಲ್ಲ. ಒಂದಷ್ಟು ಸಿನಿಮಾಗಳ ಮಾತುಕತೆ ನಡೆದಿತ್ತು ಅಷ್ಟೇ. ಆ ಸಮಯದಲ್ಲಿ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇತ್ತು. ಹಾಗಾಗಿಯೇ ಹೊಟೇಲ್‌ಗೆ ಕರೆದೊಯ್ದು, ಪರಪುರುಷನೊಂದಿಗೆ ಮಲಗು ಎಂದು ಕೋಣೆಗೆ ಕಳಿಸುತ್ತಿದ್ದಳು. ಮೊದಲನೇಯದ್ದು ಮುಗೀತು ಎನ್ನುತ್ತಿದ್ದಂತೆ, ಎರಡನೇ ಗಿರಾಕಿ ಹುಡುಕಲು ಅಮ್ಮ ಶುರು ಮಾಡುತ್ತಿದ್ದಳು. ಅದು ನಿಧಾನಕ್ಕೆ ಹೆಚ್ಚಾಗುತ್ತಲೇ ಹೋಯಿತು. ಆದರೆ, ಯಾವಾಗ ಸಿನಿಮಾ ಅವಕಾಶಗಳು ಹೆಚ್ಚಾಗುತ್ತ ಹೋದವೋ ಇವೆಲ್ಲವೂ ಕಡಿಮೆ ಆಯಿತು.
ಇನ್ನೊಂದು ವಿಚಾರ ಏನೆಂದರೆ, ಯಾರೊಂದಿಗೆ ನಾನು ಕನ್ಯೆಯಾಗಿರಬೇಕು ಎಂದು ಬಯಸಿದ್ದೆನೋ, ಆ ವ್ಯಕ್ತಿ ನನ್ನ ಜತೆಗಿದ್ದಾಗ ಆ ಕನ್ಯತ್ವ ನನ್ನ ಬಳಿ ಇರಲಿಲ್ಲ. ಆಗಲೇ ನಾನು ಅದನ್ನು ಕಳೆದುಕೊಂಡಿದ್ದೆ. ಎಂದು ತೆಲುಗಿನ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಶಕೀಲಾ ಹೇಳಿಕೊಂಡಿದ್ದಾರೆ.