ಅಮೇರಿಕಾದಲ್ಲಿ ಭಾರತೀಯ ವಿದ್ಯಾರ್ಥಿ ಗುಂಡೇಟಿಗೆ ಬಲಿ
Friday, November 24, 2023
ವಾಷಿಂಗ್ಟನ್: ಅಮೆರಿಕಾದ ಒಹಿಯೊ ಎಂಬಲ್ಲಿ ಗುಂಡಿನ ದಾಳಿ ನಡೆದು ಪಿಎಚ್ ಡಿ ವಿದ್ಯಾರ್ಥಿ 26 ವರ್ಷದ ಭಾರತೀಯ ಯುವಕನ ಮೃತಪಟ್ಟಿದ್ದಾನೆ ಎಂದು ವೈದ್ಯಕೀಯ ವಿಶ್ವವಿದ್ಯಾನಿಲಯ ಪ್ರಕಟಿಸಿದೆ.
ಸಿನ್ಸಿನಾಟಿ ವಿಶ್ವವಿದ್ಯಾನಿಲಯ ವೈದ್ಯಕೀಯ ಕಾಲೇಜಿನ ನಾಲ್ಕನೇ ವರ್ಷದ ಪಿಎಚ್ ಡಿ ವಿದ್ಯಾರ್ಥಿ ಆದಿತ್ಯ ಅದಲ್ಕಾ ಹತ್ಯೆಗೀಡಾದ ಯುವಕ ಎಂದು ವೈದ್ಯಕೀಯ ಶಾಲೆಯ ಹೇಳಿಕೆಯನ್ನು ಉಲ್ಲೇಖಿಸಿ ಡಬ್ಲ್ಯುಎಕ್ಸ್‌ಐಎಕ್ಸ್- ಟಿವಿ ವರದಿ ಮಾಡಿದೆ.
ಆದಿತ್ಯ ಅದಲ್ಕಾ ಯುಸಿ ಮೆಡಿಕಲ್ ಸೆಂಟರ್ ನಲ್ಲಿ ನವೆಂಬರ್ ತಿಂಗಳ ಆರಂಭದಲ್ಲಿ ಮೃತಪಟ್ಟಿದ್ದಾರೆ ಎಂದು ಹ್ಯಾಮಿಲ್ಟನ್ ಕೌಂಟಿ ಕೊರೋನರ್ ಸ್ಪಷ್ಟಪಡಿಸಿದೆ. ವಿಯಾಡಕ್ಟ್ ಪಶ್ಚಿಮ ಬೆಟ್ಟ ಶ್ರೇಣಿಯ ಗೋಡೆಗೆ ಅಪ್ಪಳಿಸಿದ ಕಾರಿನೊಳಗೆ ನವೆಂಬರ್ 9ರಂದು ಯುವಕನೊಬ್ಬ ಮೃತಪಟ್ಟ ಸ್ಥಿತಿಯಲ್ಲಿ ಇದ್ದುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಆ ದಾರಿಯಾಗಿ ಹಾದು ಹೋಗುತ್ತಿದ್ದ ಚಾಲಕರು 911ಗೆ ಕರೆ ಮಾಡಿ, ಕಾರಿನಲ್ಲಿ ಗುಂಡು ಹಾಯ್ದ ರಂಧ್ರಗಳಿದ್ದು ಒಳಗೆ ವ್ಯಕ್ತಿಗೆ ಗುಂಡು ತಗುಲಿದೆ ಎಂಬ ಮಾಹಿತಿ ನೀಡಿದ್ದರು. ಅದರಂತೆ ಚಿಂತಾಜನಕ ಸ್ಥಿತಿಯಲ್ಲಿದ್ದ ಗಾಯಾಳು ಆದಿತ್ಯರನ್ನು ಯುಸಿ ಮೆಡಿಕಲ್ ಸೆಂಟರ್ ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಎರಡು ದಿನ ಬಳಿಕ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.