-->
ರನ್ ವೇ ಯಿಂದ ನಿಯಂತ್ರಣ ಕಳೆದುಕೊಂಡು ಸಮುದ್ರಕ್ಕೆ ಬಿದ್ದ ವಿಮಾನ - VIDEO

ರನ್ ವೇ ಯಿಂದ ನಿಯಂತ್ರಣ ಕಳೆದುಕೊಂಡು ಸಮುದ್ರಕ್ಕೆ ಬಿದ್ದ ವಿಮಾನ - VIDEO


ಹವಾಯಿ: ಅಮೆರಿಕ ನೌಕಾಪಡೆಯ ಬೃಹತ್ ಕಣ್ಗಾವಲು ವಿಮಾನವೊಂದು ರನ್‌ವೇಯಲ್ಲಿ ನಿಯಂತ್ರಣ ಕಳೆದುಕೊಂಡು ಸಮುದ್ರಕ್ಕೆ ಬಿದ್ದ ಘಟನೆ ನಡೆದಿದೆ. ವಿಮಾನದಲ್ಲಿ 9 ಜನರಿದ್ದು, ಎಲ್ಲರೂ ಈಜಿ ದಡ ತಲುಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಮಾನ ಸಮುದ್ರದಲ್ಲಿ ತೇಲುತ್ತಿದ್ದ ದೃಶ್ಯ ದೊರೆತಿದೆ.

ಹವಾಯಿ ಮೆರೈನ್ ಕಾರ್ಪ್ಸ್ ಬೇಸ್‌ನಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಈ ಅಪಘಾತವನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ.ಘಟನೆ ತಿಳಿದ ತಕ್ಷಣ ಕೋಸ್ಟ್ ಗಾರ್ಡ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಎಲ್ಲಾ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅವರು ತಾವಾಗಿಯೇ ಈಜಿ ದಡ ತಲುಪಿದರು.

ಸಮುದ್ರದಲ್ಲಿ ಬೋಟಿಂಗ್ ಮಾಡುತ್ತಿದ್ದ ಜನರು ವಿಮಾನ ನೀರಿನ ಮೇಲೆ ತೇಲುತ್ತಿರುವುದನ್ನು ಕಂಡು ಅಚ್ಚರಿಗೊಂಡಿದ್ದರು. ವಿಮಾನ ಸಮುದ್ರದಲ್ಲಿ ಇಳಿದ ಸಂದರ್ಭದಲ್ಲಿ ದಟ್ಟ ಮಂಜು ಆವರಿಸಿ ಗೋಚರತೆ ಕ್ಷೀಣಿಸಿತ್ತು.

 P-8A ಪೋಸಿಡಾನ್ ವಿಮಾನವು ಅಮೆರಿಕ ನೌಕಾಪಡೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜಲಾಂತರ್ಗಾಮಿ ನೌಕೆಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಇದಕ್ಕಿದೆ. ಜಲಾಂತರ್ಗಾಮಿ ನೌಕೆಗಳ ಮೇಲ್ವಿಚಾರಣೆ ಮತ್ತು ದಾಳಿಗೆ P-8A ಪೋಸಿಡಾನ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆಯಂತೆ. ಇದಲ್ಲದೆ, ವಿಚಕ್ಷಣ ಮತ್ತು ಗುಪ್ತಚರ ಮಾಹಿತಿ ಸಂಗ್ರಹಕ್ಕಿದು ಅನುಕೂಲಕಾರಿಯಾಗಿದೆ. ಈ ವಿಮಾನವನ್ನು ಬೋಯಿಂಗ್ ಕಂಪನಿ ಅಭಿವೃದ್ಧಿಪಡಿಸಿದೆ. ಟಾರ್ಪಿಡೊ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಕೂಡಾ ಇದು ಸಾಗಿಸಬಲ್ಲದು. ಅಪಘಾತದ ಸಮಯದಲ್ಲಿ ವಿಮಾನದಲ್ಲಿ ಶಸ್ತ್ರಾಸ್ತ್ರಗಳು ಇದ್ದವೇ ಎಂಬುದು ತಿಳಿದುಬಂದಿಲ್ಲ.

ಈ ವಿಮಾನವನ್ನು ನಿರ್ವಹಿಸುವ ಗಸ್ತು ಸ್ಕ್ವಾಡ್ರನ್ ಕಾನೋಹೆ ಕೊಲ್ಲಿಯಲ್ಲಿದೆ. ಮೆರೈನ್ ಕಾರ್ಪ್ಸ್ ಕೂಡ ಹವಾಯಿಯಲ್ಲಿ ಪ್ರಧಾನ ಕಚೇರಿ ಹೊಂದಿದೆ. ಪ್ರಪಂಚದಲ್ಲಿ, P8 ವಿಮಾನವನ್ನು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಬ್ರಿಟನ್, ನಾರ್ವೆ ಮತ್ತು ಭಾರತದ ಸೇನೆ ಬಳಸುತ್ತವೆ. 

Ads on article

Advertise in articles 1

advertising articles 2

Advertise under the article