ಮಂಗಳೂರು: ದ.ಕ.ಲೋಕಸಭಾ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲುಗೆ ಮತ್ತೆ ಟಿಕೆಟ್ - ಸುಳಿವು ನೀಡಿದ ವಿಜಯೇಂದ್ರ
Wednesday, November 22, 2023
ಮಂಗಳೂರು: ನಳಿನ್ ಕುಮಾರ್ ಕಟೀಲು ಅವರಿಗೆ ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ನೀಡಲಾಗುತ್ತದೆ ಎಂಬ ಸುಳಿವನ್ನು ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಂಗಳೂರಿನಲ್ಲಿ ಸುಳಿವು ನೀಡಿದ್ದಾರೆ.
READ
- 700 ಕ್ಕೂ ಅಧಿಕ ಬೀದಿ ನಾಯಿಗಳಿಗೆ ಪ್ರತಿನಿತ್ಯ ಆಹಾರ: ಬಾಡಿಗೆ ಮನೆಯಲ್ಲಿದ್ದರೂ ಎರಡು ದಶಕಗಳಿಂದ ನಿತ್ಯ ಸೇವೆ ಮಾಡುತ್ತಿರುವ ಮಹಾತಾಯಿ ( VIDEO NEWS)
- ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ನಡೆಸಿದ ಕತ್ರಿನಾ ಕೈಫ್- ಬಾಲಿವುಡ್ ನಟಿಯಿಂದ ರಹಸ್ಯ ಪೂಜೆ- ( Video News)
- ಪಿಲಿಕುಳದ ಹುಲಿ “ರಾಣಿ” ಈಗ ಹತ್ತು ಮಕ್ಕಳ ತಾಯಿ- ಇನ್ನೊಂದು ತಿಂಗಳಲ್ಲಿ ಎರಡು ಮರಿಗಳು ವೀಕ್ಷಣೆಗೆ ಲಭ್ಯ ( Video News)
ಇಂದು ನಗರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕಾಗಿದೆ ಕಾರ್ಯಕರ್ತರಿಗೆ ಕರೆ ನೀಡಿದರು.
ಮುಂದೆ ಬರುವ ಲೋಕಸಭಾ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಮತ್ತೊಮ್ಮೆ ನಮ್ಮ ಪಕ್ಷದ ಅಭ್ಯರ್ಥಿಯನ್ನು ನಳಿನ್ ಕುಮಾರ್ ಕಟೀಲು ಅವರನ್ನು ದ.ಕ.ಜಿಲ್ಲೆಯಿಂದ ಗೆಲ್ಲಿಸುವ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು. ಈ ಮೂಲಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲು ಅವರಿಗೆ ಟಿಕೆಟ್ ಫಿಕ್ಸ್ ಎಂಬ ಸುಳಿವನ್ನು ನೀಡಿದಂತಾಗಿದೆ. ಇದು ಜಿಲ್ಲೆಯ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದಂತಾಗಿದೆ.
ಈಗಾಗಲೇ ನಳಿನ್ ಅವರ ಬಗ್ಗೆ ಕಾರ್ಯಕರ್ತರಲ್ಲೇ ಅಭಿಪ್ರಾಯ ಸರಿಯಿಲ್ಲ. ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಬಿಜೆಪಿ ಭದ್ರಕೋಟೆಯೆನಿಸಿರುವ ಪುತ್ತೂರಿನಲಗಲಿಯೇ ಪಕ್ಷವನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಅರುಣ್ ಕುಮಾರ್ ಪುತ್ತಿಲ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನೂ ಕೆಲವರು ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಈ ಮಧ್ಯೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನಳಿನ್ ಗೆಲ್ಲಿಸಿ ಎಂದು ವಿಜಯೇಂದ್ರ ಹೇಳಿರುವುದು ಚರ್ಚೆಗೆ ಕಾರಣವಾಗಿದೆ.