ಡಂಪರ್ ಟ್ರಕ್ - ಬಸ್ ನಡುವೆ ಭೀಕರ ಅಪಘಾತ : 12 ಮಂದಿ ಸಜೀವ ದಹನ
Thursday, December 28, 2023
ಮಧ್ಯಪ್ರದೇಶ: ಇಲ್ಲಿನ ಗುಣಾ ಜಿಲ್ಲೆಯಲ್ಲಿ ಡಂಪರ್ ಟ್ರಕ್ ಗೆ ಢಿಕ್ಕಿಯಾದ ಸಂದರ್ಭ ಬಸ್ಸಿಗೆ ಬೆಂಕಿ ಹತ್ತಿಕೊಂಡು ಸಂಭವಿಸಿರು ಭೀಕರ ದುರಂತದಲ್ಲಿ 12 ಮಂದಿ ಸಜೀವ ದಹನವಾದ ಘಟನೆ ಬುಧವಾರ ರಾತ್ರಿ ನಡೆದಿದೆ. ಬಸ್ ನಲ್ಲಿದ್ದ ಇತರ 14 ಮಂದಿಗೆ ತೀವ್ರ ಸ್ವರೂಪದ ಸುಟ್ಟಗಾಯಗಳಾಗಿವೆ.
ಗುಣಾ- ಆರೋನ್ ರಸ್ತೆಯಲ್ಲಿ ಖಾಸಗಿ ಬಸ್ಸೊಂದು ಡಂಪರ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಈ ವೇಳೆ ದುರಂತ ಸಂಭವಿಸಿದೆ. ಬುಧವಾರ ರಾತ್ರಿ 9ರ ಸುಮಾರಿಗೆ ಬಸ್ ಆರೋನ್ ಕಡೆಗೆ ತೆರಳುತ್ತಿತ್ತು. ಆಗ ಎದುರಿನಿಂದ ಬರುತ್ತಿದ್ದ ಡಂಪರ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ ಸುಮಾರು 30 ಮಂದಿ ಪ್ರಯಾಣಿಕರಿದ್ದರು. ಬಸ್ಸಿಗೆ ಬೆಂಕಿ ಹತ್ತಿಕೊಂಡಾಗ ನಾಲ್ವರು ಬಸ್ ನಿಂದ ಹೊರಜಿಗಿಯಲು ಯಶಸ್ವಿಯಾಗಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತರುಣ್ ರಾಠಿ ಹೇಳಿದ್ದಾರೆ.
ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್, ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 4 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.