ಉಳ್ಳಾಲ: ನಿಷೇಧಿತ ಮಾದಕದ್ರವ್ಯ ಸಾಗಿಸುತ್ತಿದ್ದ ಇಬ್ಬರು ಪೊಲೀಸ್ ವಶಕ್ಕೆ - 14ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ
Tuesday, December 5, 2023
ಉಳ್ಳಾಲ: ನಿಷೇಧಿತ ಮಾದಕದ್ರವ್ಯ ಮೆಥಂಫೆಟಾಮೈನ್ ಹಾಗೂ 250 ಎಲ್ಎಸ್ ಡಿ ಸ್ಟ್ಯಾಂಪ್ ಡ್ರಗ್ ಅಕ್ರಮ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಶಿಶಿರ್ ದೇವಾಡಿಗ ಹಾಗೂ ಸುಶಾನ್ ಎಲ್. ಬಂಧಿತ ಆರೋಪಿಗಳು.
ಆರೋಪಿಗಳು ಡಿಸೆಂಬರ್ 4ರಂದು ಉಳ್ಳಾಲದ ಪೆರ್ಮನ್ನೂರು ಗ್ರಾಮದ ಸಂತೋಷನಗರದ ರಸ್ತೆ ಬದಿಯಲ್ಲಿ ಬಿಳಿ ಬಣ್ಣದ ಸ್ವಿಪ್ಟ್ ಕಾರಿನಲ್ಲಿ ಬಂದಿದ್ದರು. ಪೊಲೀಸರು ತಪಾಸಣೆ ನಡೆಸಿ ಆರೋಪಿಗಳಾದ ಶಿಶಿರ್ ದೇವಾಡಿಗ ಮತ್ತು ಶುಶಾನ್.ಎಲ್. ನಿಷೇಧಿತ ಮಾದಕದ್ರವ್ಯ 132 ಗ್ರಾಂ ತೂಕದ ಮೆಥಂಫೆಟಮೈನ್ ಹಾಗೂ 250 ಎಲ್ಎಸ್ ಡಿ ಸ್ಯಾಂಪ್ ಡ್ರಗ್ ಅನ್ನು ಅಕ್ರಮವಾಗಿ ಸಾಗಾಟ ಮಾಡಿ ಮಾರಾಟ ಮಾಡಲು ಉದ್ದೇಶಿಸಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸಿದ ಉಳ್ಳಾಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಮಾದಕ ವಸ್ತು, 3,70,050 ರೂ. ನಗದು ಹಾಗೂ ಸ್ವಿಪ್ಟ್ ಕಾರು ಸೇರಿದಂತೆ 14,01,050 ಮೌಲ್ಯದ ನಗದು ಹಾಗೂ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಲಾಂಗ್ ಮಚ್ಚು ಸೇರಿದಂತೆ ಮಾರಕಾಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.