17 ವರ್ಷದ ಯುವತಿಯ ಅತ್ಯಾ*ಚಾರ- ನೇಪಾಳ ಕ್ರಿಕೆಟಿಗನಿಗೆ 10 ವರ್ಷ ಜೈಲು?
Sunday, December 31, 2023
ಕಂಡು: ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನೇಪಾಳ ಕ್ರಿಕೆಟ್ ತಂಡದ ಹೈಪ್ರೊಫೈಲ್ ಆಟಗಾರ ಸಂದೀಪ್ ಲಮಿಚಾನೆ ತಪ್ಪಿತಸ್ಥ ಎಂದು ಶನಿವಾರ ನ್ಯಾಯಾಲಯ ತೀರ್ಪಿತ್ತಿದೆ.
ಕಳೆದ ವರ್ಷ ಆಗಷ್ಟ್ ತಿಂಗಳಲ್ಲಿ 17 ವರ್ಷದ ಹುಡುಗಿಯನ್ನು ತನ್ನ ಹೋಟೆಲ್ ರೂಮಿನಲ್ಲಿ ಸಂದೀಪ್ ಅತ್ಯಾ*ಚಾರ ಎಸಗಿದ್ದಾಗಿ ಆರೋಪಿಸಲಾಗಿತ್ತು.
"ಈಗ ಬಂದಿರುವ ತೀರ್ಪು ದುರದೃಷ್ಟಕರ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ,'' ಎಂದು ಸಂದೀಪ್ ಪರ ವಕೀಲರು ಪ್ರತಿಕ್ರಿಯಿಸಿದ್ದಾರೆ. ಸಂದೀಪ್ ಲಮಿಚಾನೆ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.