2ಕೋಟಿ ಚಂದಾದಾರರ ಸಂಖ್ಯೆಯನ್ನು ದಾಟಿದ ಮೋದಿಯವರ ಅಧಿಕೃತ ಯೂಟ್ಯೂಬ್ ಚಾನೆಲ್
Wednesday, December 27, 2023
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಯೂಟ್ಯೂಬ್ ಚಾನೆಲ್ ಚಂದಾದಾರರ ಸಂಖ್ಯೆ ಏರಿಕೆಯಾಗಿದೆ. ಮಂಗಳವಾರದ ವೇಳೆಗೆ ಸಬ್ಸ್ಕ್ರೈಬರ್ಸ್ ಸಂಖ್ಯೆ 2 ಕೋಟಿ ತಲುಪಿದೆ. ಈ ಮೂಲಕ ವಿಶ್ವದ ಅಗ್ರಮಾನ್ಯ ನಾಯಕರ ಪೈಕಿ ಸದ್ಯ ಮೋದಿ ಅವರು ಮುಂಚೂಣಿಯಲ್ಲಿದ್ದಾರೆ.
ಮೋದಿಯವರ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊಗಳು 4.5 ಶತಕೋಟಿಗೂ ಅಧಿಕ ವೀಕ್ಷಣೆಗಳನ್ನು ಕಂಡಿದೆ. ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಸುಮಾರು 64 ಲಕ್ಷ ಚಂದಾದಾರರನ್ನು ಹೊಂದಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಇದು ಮೋದಿಯವರು ಹೊಂದಿರುವ ಸಬ್ ಸ್ಕ್ರೈಬ್ ಗಿಂತ ಮೂರನೇ ಒಂದು ಭಾಗಕ್ಕಿಂತ ಕಡಿಮೆಯಾಗಿದೆ. ಆದರೆ ವೀಕ್ಷಣೆಗೆ ಸಂಬಂಧಿಸಿದಂತೆ ನೋಡುವುದಾದಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ 22.4 ಕೋಟಿಗಳೊಂದಿಗೆ ಮೋದಿಯವರ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ.
ಯುಎಸ್ ಅಧ್ಯಕ್ಷ ಜೋ ಬಿಡೆನ್ 7.89 ಲಕ್ಷ ಚಂದಾದಾರರನ್ನು ಹೊಂದಿದ್ದರೆ, ಅವರ ಟರ್ಕಿಯ ಕೌಂಟರ್ ರೆಸೆಪ್ ತಯ್ಯಿಪ್ ಎರ್ಡೋಗನ್ 3.16 ಲಕ್ಷ ಸಬ್ಸ್ಕ್ರೈಬರ್ಸ್ ಅನ್ನು ಹೊಂದಿದ್ದಾರೆ. ಪ್ರಧಾನ ಮಂತ್ರಿಗೆ ಲಿಂಕ್ ಮಾಡಲಾದ ‘ಯೋಗ ವಿತ್ ಮೋದಿ’ ಯುಟ್ಯೂಬ್ ಚಾನೆಲ್ ಕೂಡ 73,000 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ.