2025ರ ವರೆಗೆ ಈ ರಾಶಿಯವರಿಗೆ ಗುರು ದೆಸೆ ..!ಇವರಿಗಿರಲಿದೆ ಸಂಪೂರ್ಣ ಗುರು ಕೃಪೆ..!
Tuesday, December 5, 2023
ಮೇಷ ರಾಶಿ : ಈ ಅವಧಿಯಲ್ಲಿ, ಮೇಷ ರಾಶಿಯವರು ನಿರೀಕ್ಷೆಗೂ ಮೀರಿದ ಯಶಸ್ಸನ್ನು ಸಾಧಿಸುತ್ತಾರೆ. ಕಚೇರಿಯಲ್ಲಿ ಬಡ್ತಿ ಪಡೆಯಬಹುದು. ಅಂದು ಕೊಂಡ ಕೆಲಸ ಯಾವ ಅಡೆತಡೆಯೂ ಇಲ್ಲದೆ ನೆರವೇರುವುದು. 2025 ರವರೆಗೆ ಸೋಲು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.
ವೃಷಭ ರಾಶಿ : ವೃಷಭ ರಾಶಿಯವರ ಮೇಲೆ ಕೂಡಾ ಗುರುವಿನ ಕೃಪೆ ಅಧಿಕವಾಗಿರುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಅಸಾಧ್ಯ ಎನ್ನುವಂಥಹ ಕೆಲಸವೂ ಈ ಸಮಯದಲ್ಲಿ ಸಾಧ್ಯವಾಗುವುದು.
ಮಿಥುನ ರಾಶಿ :ಮಿಥುನ ರಾಶಿಯವರ ಆದಾಯ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಹೊಸ ಕೆಲಸ ಆರಂಭಿಸಲು ಇದು ಸಕಾಲ. ಈ ಸಮಯದಲ್ಲಿ ಆರಂಭಿಸಿದ ಕೆಲಸದಲ್ಲಿ ಸೋಲು ಇರುವುದಿಲ್ಲ.
ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರ ಮೇಲೆ ಗುರುವಿನ ಪ್ರಭಾವ ಸ್ವಲ್ಪ ಜಾಸ್ತಿಯೇ ಇರುತ್ತದೆ. ಏನೇ ಕೆಲಸ ಮಾಡಿದರೂ ಫಲಿತಾಂಶ ನಿಮ್ಮ ನಿರೀಕ್ಷೆಯಂತೆಯೇ ಇರುವುದು. ಕೆಲಸದಲ್ಲಿ ಬಡ್ತಿ ದೊರೆಯುತ್ತದೆ. ವ್ಯಾಪಾರದಲ್ಲಿಯೂ ಹೆಚ್ಚಿನ ಲಾಭವಾಗುವುದು.
ಸಿಂಹ ರಾಶಿ : ಸಿಂಹ ರಾಶಿಯವರ ಅದೃಷ್ಟ ಬದಲಾಗುತ್ತದೆ. ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುತ್ತದೆ. ಅದೃಷ್ಟ ಸದಾ ನಿಮ್ಮ ಜೊತೆಗಿದ್ದು ಕಾಯುತ್ತದೆ. ಮಾಡುವ ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಾಧಿಸುತ್ತೀರಿ.