ಡಿ. 30ರಿಂದ ಮಂಗಳೂರು-ಗೋವಾ ವಂದೇ ಭಾರತ್- ಪ್ರಧಾನಿಯಿಂದ ಚಾಲನೆ ನಿರೀಕ್ಷೆ
Saturday, December 23, 2023
ಮಂಗಳೂರು: ಮಂಗಳೂರು-ಮಡಗಾಂವ್ (ಗೋವಾ) ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಡಿ. 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಚಾಲನೆ ನೀಡುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
ಅಂದು ದೇಶದ 6 ಕಡೆ ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮ ನಿಗದಿಯಾಗಿದೆ.
ರೈಲು ಸದ್ಯದ ನಿರೀಕ್ಷಿತ ವೇಳಾಪಟ್ಟಿ ಪ್ರಕಾರ ಮಂಗಳವಾರ ಬಿಟ್ಟು ವಾರದ 6 ದಿನ ಸಂಚರಿಸಲಿದೆ. ಪ್ರತೀ ದಿನ ಬೆಳಗ್ಗೆ 8.30ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಮಧ್ಯಾಹ್ನ 1.05ಕ್ಕೆ ಮಡಗಾಂವ್ ತಲುಪಲಿದೆ. ಮಡಗಾಂವ್‌ನಿಂದ ಸಂಜೆ 6.10ಕ್ಕೆ ಹೊರಟು ರಾತ್ರಿ 10.45ಕ್ಕೆ ಮಂಗಳೂರು ತಲುಪಲಿದೆ. ಉಡುಪಿ ಹಾಗೂ ಕಾರವಾರದಲ್ಲಿ ಮಾತ್ರ ನಿಲುಗಡೆ ಇರಲಿದೆ. ಮಂಗಳೂರು ಸೆಂಟ್ರಲ್ ನಲ್ಲಿ ನಿರ್ಮಾಣವಾದ 4 ಹಾಗೂ 5ನೇ ಫ್ಲಾಟ್‌ಫಾರ್ಮ್ ಕೂಡ ಇದೇ ಸಂದರ್ಭ ಉದ್ಘಾಟನೆಗೊಳ್ಳಲಿದೆ ಎಂದು ತಿಳಿದುಬಂದಿದೆ.