ಬುಧನ ಹಿಮ್ಮುಖ ಚಲನೆ ಈ 3 ರಾಶಿಯವರಿಗೆ ಅತ್ಯಂತ ಶುಭ ಫಲಗಳನ್ನು ನೀಡಲಿದೆ...!
Tuesday, December 5, 2023
ಮೇಷ ರಾಶಿ: ಈ ಸಮಯದಲ್ಲಿ ನೀವು ಉದ್ಯೋಗ ಬದಲಾವಣೆ ಮಾಡಬಹುದು. ಇದು ನಿಜಕ್ಕೂ ಬಹಳ ಒಳ್ಳೆಯ ಸಮಯವಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಯಶಸ್ಸು ಸಿಗುತ್ತದೆ ಎನ್ನಬಹುದು. ಒಟ್ಟಾರೆ ಕಷ್ಟಗಳಿಂದ ಮುಕ್ತಿ ಸಿಗುತ್ತದೆ.
ಮೀನ ರಾಶಿ: ಧನು ರಾಶಿಯಲ್ಲಿ ಬುಧದ ಹಿಮ್ಮುಖ ಚಲನೆ ಮಾಡುವುದು ನಿಮ್ಮ ವೈಯಕ್ತಿಕ ಜೀವನದಲ್ಲಿ ಸಂತೊಷವನ್ನ ಮೂಡಿಸುತ್ತದೆ. ಕುಟುಂಬದಲ್ಲಿದ್ದ ಎಲ್ಲಾ ಸಮಸ್ಯೆಗಳಿಗೆ ಈಗ ಪರಿಹಾರ ಸಿಗುತ್ತದೆ. ಹಳೆಯ ಹೂಡಿಕೆಯಿಂದ ನಿಮಗೆ ಲಾಭವಾಗುತ್ತದೆ.
ಮಿಥುನ ರಾಶಿ: ಬುಧನ ಕಾರಣದಿಂದ ಯಾವುದೇ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದಕ್ಕೆ ಪರಿಹಾರ ಸಿಗುತ್ತದೆ. ಮುಖ್ಯವಾಗಿ ದೀರ್ಘಕಾಲದ ಅನಾರೋಗ್ಯ ಮುಕ್ತಿ ಸಿಗುತ್ತದೆ. ವ್ಯಾಪಾರ ವಿಸ್ತರಣೆಗೆ ಇದು ಶುಭ ಸಮಯ. ಕುಟುಂಬದಲ್ಲಿ ಸಂತೋಷ ಹೆಚ್ಚಾಗುತ್ತದೆ.