-->
ಮಲ್ಪೆ: ಮೀನುಗಾರರ ಬಲೆಗೆ ಬಿತ್ತು 400 ಕೆಜಿ ಗಾತ್ರದ ಬೃಹತ್ ಮೀನು

ಮಲ್ಪೆ: ಮೀನುಗಾರರ ಬಲೆಗೆ ಬಿತ್ತು 400 ಕೆಜಿ ಗಾತ್ರದ ಬೃಹತ್ ಮೀನು


ಮಲ್ಪೆ: ಇಲ್ಲಿನ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನುಗಾರರಿಗೆ 400 ಕೆ.ಜಿ. ತೂಕದ ಬೃಹತ್ ಗಾತ್ರದ ಮೀನು ದೊರೆತಿದೆ.

ಬಲರಾಂ ಪರ್ಸೀನ್ ಬೋಟಿನವರಿಗೆ ಈ ಬೃಹತ್ ಗಾತ್ರದ ಮೀನು ದೊರೆತಿದೆ. ಈ ಮೀನಿನ ಹೆಸರು ಬಿಲ್‌ಫಿಶ್. ಇದನ್ನು ಸ್ಥಳೀಯವಾಗಿ ಮಡಲು ಮೀನು ಅಥವಾ ಕಟ್ಟೆಕೊಂಬು ಮೀನು ಎಂದು ಕರೆಯುತ್ತಾರೆ. ಇದು ಗಿಲ್‌ನೆಟ್‌ನಲ್ಲಿ ಸಣ್ಣಗಾತ್ರದ ಮೀನುಗಳು ಮಾತ್ರ ಸಾಮಾನ್ಯವಾಗಿ ಸಿಗುತ್ತಿರುತ್ತದೆ. ಈ ರೀತಿ ದೊಡ್ಡಗಾತ್ರದ ಮೀನು ದೊರೆಯುವುದು ಅಪರೂಪ ಎನ್ನುತ್ತಾರೆ ಮೀನುಗಾರರು.

ಸಣ್ಣ ಗಾತ್ರದ ಮಡಲು ಮೀನಿಗೆ ಇರುವ ಬೆಲೆ ದೊಡ್ಡ ಮೀನಿಗೆ ಇರುವುದಿಲ್ಲ ಎಂದು ಮಲ್ಪೆ ಕನ್ನಿ ಮೀನುಗಾರ ಸಂಘದ ಅಧ್ಯಕ್ಷ ದಯಕರ ವಿ.ಸುವರ್ಣ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article