ಆತ ಭಾರತದ ಯುವಕ, ಆಕೆ ಪಾಕ್ ಯುವತಿ: ಇಬ್ಬರೂ ವಿವಾಹವಾಗಲಿದ್ದಾರೆ - ಪಾಕ್ ವಧುವಿಗೆ 45 ದಿನಗಳ ವೀಸಾ ನೀಡಲಿದೆ ಭಾರತ ಸರಕಾರ
Tuesday, December 5, 2023
ನವದೆಹಲಿ: ಭಾರತೀಯ ಯುವಕ ಹಾಗೂ ಪಾಕ್ ಯುವತಿ ಪ್ರೀತಿಯ ಬಲೆಗೆ ಬಿದ್ದಿದ್ದಾರೆ. ಇಬ್ಬರೂ ತನಗೆ ಎದುರಾಗಿರುವ ಸಂಕಷ್ಟಗಳನ್ನು ಎದುರಿಸಿ ಇದೀಗ ಮದುವೆಯಾಗುತ್ತಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾರತೀಯ ಭಾವೀ ಪಾಕ್ ಸೊಸೆಗೆ ಭಾರತಕ್ಕೆ ಬರಲು ವೀಸಾ ನೀಡಿದೆ.
ಪಾಕ್ ನ ಕರಾಚಿ ನಿವಾಸಿ ಜವಾರಿಯಾ ಖಾನಂ ಎಂಬ ಯುವತಿ, ಭಾರತದ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ವಾಸಿಸುವ ಸಮೀರ್ ಖಾನ್ ನನ್ನು ಪ್ರೀತಿಸಿದ್ದಾಳೆ. ಇಬ್ಬರೂ ಸೊಶಿಯಲ್ ಮೀಡಿಯಾದಲ್ಲಿ ಪರಸ್ಪರ ಪರಿಚಯವಾಗಿ ಪ್ರೀತಿಯ ಬಲೆಗೆ ಬಿದ್ದಿದ್ದರು. ಬಳಿಕ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಇವರಿಬ್ಬರೂ ಮದುವೆ ಆಗುವುದು ಅಷ್ಟು ಸುಲಭವಾಗಿರಲಿಲ್ಲ. ಜವೇರಿಯಾ ಮತ್ತು ಸಮೀರ್ ಲವ್ ಸ್ಟೋರಿಯಲ್ಲಿ ದೊಡ್ಡ ಸಮಸ್ಯೆ ಎಂದರೆ ಎರಡು ದೇಶಗಳ ನಡುವಿನ ಗಡಿ.
ಪಂಜಾಬ್‌ನ ಖಾದಿಯಾನ್‌ನ ಸಾಮಾಜಿಕ ಕಾರ್ಯಕರ್ತ ಮಕ್ಬೂಲ್ ಅಹ್ಮದ್ ಖಾದಿಯಾನ್ ಅವರು ಈ ಜೋಡಿಯನ್ನು ಒಂದುಗೂಡಿಸಲು ಪ್ರಯತ್ನಿಸಿದರು. ಅವರ ಪ್ರಯತ್ನ ಫಲ ನೀಡಿತು. ಬಳಿಕ ಭಾರತ ಸರ್ಕಾರ ಜವಾರಿಯಾಗೆ ವೀಸಾ ನೀಡಿ ಭಾರತಕ್ಕೆ ಬರಲು ಅವಕಾಶ ನೀಡಿತು. ಭಾರತ ಸರ್ಕಾರವು ಜವೇರಿಯಾಗೆ 45 ದಿನಗಳ ವೀಸಾವನ್ನು ನೀಡಿದೆ.
ಜವೇರಿಯಾ ಖಾನಮ್ ಇಂದು ಅಟ್ಟಾರಿ-ವಾಘಾ ಗಡಿ ಮೂಲಕ ಪಾಕಿಸ್ತಾನದಿಂದ ಅಮೃತಸರ ತಲುಪಲಿದ್ದಾರೆ. ಬಳಿಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ನೇರವಾಗಿ ಕೋಲ್ಕತ್ತಾ ತಲುಪಲಿದ್ದಾರೆ. ಕೆಲವು ದಿನಗಳ ಬಳಿಕ ಜವೇರಿಯಾ ಮತ್ತು ಸಮೀರ್ ಮದುವೆಯಾಗುತ್ತಾರೆ. 45 ದಿನಗಳ ನಂತರ ಜವೇರಿಯಾ ದೀರ್ಘಾವಧಿಯ ವೀಸಾವನ್ನು ಕೋರಿ ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಿದ್ದಾರಂತೆ.
ಸಮೀರ್ ಖಾನ್ ಮಾತನಾಡಿ, ಭಾರತ ತನ್ನ ಭಾವಿ ಪತ್ನಿಗೆ ಎರಡು ಬಾರಿ ವೀಸಾ ನೀಡಲು ನಿರಾಕರಿಸಿದೆ. ಇದಾದ ಬಳಿಕ ಸಾಮಾಜಿಕ ಕಾರ್ಯಕರ್ತ ಮತ್ತು ಪತ್ರಕರ್ತ ಮಕ್ಬೂಲ್ ಅಹ್ಮದ್ ವಾಸಿ ಖಾದಿಯಾನ್ ಅವರ ಸಂಪರ್ಕಕ್ಕೆ ಬಂದರು. ಏಕೆಂದರೆ ಅವರು ಈಗಾಗಲೇ ಹಲವು ಪಾಕಿಸ್ತಾನಿ ವಧುಗಳಿಗೆ ವೀಸಾ ಪಡೆಯಲು ಸಹಾಯ ಮಾಡಿದ್ದಾರೆ. ಈ ವಿಚಾರದಲ್ಲಿ ಮಕ್ಬೂಲ್ ಅಹ್ಮದ್ ನಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರ ಪ್ರಯತ್ನದಿಂದ ಭಾರತ ಸರ್ಕಾರವ ವೀಸಾ ನೀಡಿದೆ. ಜವೇರಿಯಾ ಖಾನಮ್‌ಗೆ ವೀಸಾ ನೀಡುವ ಮೂಲಕ ಎರಡು ಕುಟುಂಬಗಳನ್ನು ಮತ್ತೆ ಒಂದುಗೂಡಿಸಲು ಸಹಾಯ ಮಾಡಿದ್ದಕ್ಕಾಗಿ ಅವರು ಭಾರತ ಸರ್ಕಾರಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.