60ರ ಮಹಿಳೆಯೊಂದಿಗೆ 31ರ ಯುವಕನ ಸೆಕ್ಸ್: ಬೇರೊಬ್ಬಳನ್ನು ಮದುವೆಯಾಗಲು ಬಿಡದ್ದಕ್ಕೆ ಇಟ್ಟಿಗೆಯಲ್ಲಿ ಹೊಡೆದು ಕೊಂದ
Sunday, December 17, 2023
ನವದೆಹಲಿ: 60ರ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ 31ರ ಯುವಕ ಆಕೆಯನ್ನೇ ಕೊಂದು ಮೃತದೇವನ್ನು ಬೆಡ್‌ರೂಮಿನಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದ. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಆಶಾದೇವಿ(60) ಕೊಲೆಯಾದ ಮಹಿಳೆ. ದೇವೇಂದ್ರ ಅಲಿಯಾಸ್ ದೇವ್(31) ಕೊಲೆ ಆರೋಪಿ. ದೇವೇಂದ್ರ ಮೃತಪಟ್ಟ ಆಶಾದೇವಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಆದರೆ ದೇವೇಂದ್ರ ಬೇರೊಬ್ಬಳನ್ನು ವಿವಾಹವಾಗುವುದನ್ನು ತಡೆದಿದ್ದಕ್ಕೆ ಕೊಲೆ ಮಾಡಿದ್ದಾಗಿ ತಿಳಿದುಬಂದಿದೆ. ಆರೋಪಿಯನ್ನು ಉತ್ತರ ಪ್ರದೇಶದ ಅಲಿಗಢದಲ್ಲಿ ಬಂಧಿಸಲಾಗಿದೆ.
ಹತ್ಯೆಯಾದ ಐದು ದಿನಗಳ ಬಳಿಕ ಶುಕ್ರವಾರ ಈಶಾನ್ಯ ದೆಹಲಿಯ ನಂದ ನಗರ ಪ್ರದೇಶದ ಆಕೆಯ ಮನೆಯಲ್ಲಿಯೇ ಆಶಾದೇವಿ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಆರೋಪಿ ದೇವೇಂದ್ರ 2015ರಲ್ಲಿ ಕೆಲಸಕ್ಕಾಗಿ ಅಲಿಗಢಕ್ಕೆ ಬಂದಿದ್ದಾನೆ. ಬಳಿಕ ತಾಮ್ರದ ತಂತಿ ಪ್ಯಾಕಿಂಗ್ ಮಾಡುವ ಬಿಸಿನೆಸ್ ಆರಂಭಿಸಿದ್ದಾನೆ. ಆದರೆ ಕೋವಿಡ್ ಕಾಲದಲ್ಲಿ ನಷ್ಟ ಅನುಭವಿಸಿದ್ದರಿಂದ 2 ವರ್ಷಗಳ ಕಾಲ ಉದ್ಯೋಗವಿಲ್ಲದೇ ಕುಳಿತಿದ್ದ. ಆದರೆ ಜರ್ಮನಿಯಲ್ಲಿ ಓದುತ್ತಿರುವುದಾಗಿ ಹೇಳಿ ಅಲಿಗಢದಲ್ಲಿ ನೆಲೆಸಿರುವ ತಂದೆಯಿಂದ ಹಣ ಪಡೆದಿದ್ದ. ಹಣ ಹೊಂದಿಸಲು ಅವನ ತಂದೆ ತನ್ನ ಭೂಮಿಯನ್ನು ಮಾರಬೇಕಾಯಿತು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
2019ರಲ್ಲಿ ಆರೋಪಿ ದೇವೇಂದ್ರ ನಂದ ನಗರಲ್ಲಿರುವ ಆಶಾದೇವಿಯ ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದಾನೆ. ಬಳಿಕ ಇಬ್ಬರಿಗೂ ಸಲಿಗೆ ಬೆಳೆದಿದೆ. ಈ ಸ್ನೇಹದ ನಡುವೆ ಇಬ್ಬರ ನಡುವೆ ದೈಹಿಕ ಸಂಬಂಧವೂ ಬೆಳೆದಿತ್ತು. ಈ ನಡುವೆ ದೇವೇಂದ್ರ ಯುವತಿಯೊಬ್ಬಳ ಪರಿಚಯವಾಗಿದೆ. ಆಕೆಯೊಂದಿಗೂ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿ ಇದೇ ಡಿಸೆಂಬರ್ 4ರಂದು ಅಲಿಗಢದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ವಿಷಯ ತಿಳಿದ ಮನೆಯೊಡತಿ ಆಶಾದೇವಿ, ದೇವೇಂದ್ರನನ್ನು ಭೇಟಿಯಾಗಲು ಕರೆದಿದ್ದಾಳೆ. ದೇವೇಂದ್ರ ನಿಶ್ಚಿತಾರ್ಥವಾಗಿರುವ ಗೆಳತಿಯನ್ನೂ ಆಕೆಯ ಮನೆಗೆ ಕರೆದುಕೊಂಡು ಬಂದು ತಾವಿಬ್ಬರು ಮದುವೆಯಾಗುತ್ತಿರುವುದಾಗಿ ಹೇಳಿದ್ದಾನೆ. ಆದರೆ ಆಶಾದೇವಿಯು ದೇವೇಂದ್ರನನ್ನು ಬೇರೆ ಮದುವೆಯಾಗಲು ಬಿಡುವುದಿಲ್ಲ ಎಂದು ಹೇಳಿದ್ದಾಳೆ. ಇದಕ್ಕೆ ಅವನು ವಿರೋಧಿಸಿದಾಗ ಆತನಿಗೆ ಕಪಾಳಮೋಕ್ಷ ಮಾಡಿದಾಳೆ. ಇದರಿಂದ ಕೋಪಗೊಂಡ ಆರೋಪಿ ಮಹಿಳೆಯ ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದಾನೆ.
ಮಹಿಳೆ ಪ್ರಜ್ಞಾಹೀನಳಾಗಿದ್ದರೂ ಆರೋಪಿ ಆಕೆಯ ತಲೆಗೆ ಹಲವಾರು ಬಾರಿ ಇಟ್ಟಿಗೆಯಿಂದ ಹೊಡೆದಾನೆ. ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ಆಶಾದೇವಿ ಬಳಿಯಿದ್ದ 13 ಸಾವಿರ, ಚಿನ್ನಾಭರಣವನ್ನು ದೋಚಿ ಅಲಿಗಢಕ್ಕೆ ಪರಾರಿಯಾಗಿದ್ದಾನೆ. ಈ ವಿಷಯ ಯಾರಿಗೂ ತಿಳಿದಿರಲಿಲ್ಲ. ಇದೇ ಡಿಸೆಂಬರ್ 5ರಂದು ಆಕೆಯ ಮನೆಯ ಕೊಠಡಿಯಿಂದ ದುರ್ವಾಸನೆ ಬರುತ್ತಿದ್ದುದ್ದನ್ನು ಗಮನಿಸಿ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬೆಡ್‌ರೂಮಿನಲ್ಲಿದ್ದ ಬಾಕ್ಸ್ ತೆರೆದು ನೋಡಿದಾಗ ಆಶಾದೇವಿಯ ಛಿದ್ರಗೊಂಡ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.