ಈ ವಾರಾಂತ್ಯಕ್ಕೆ ಕರಾವಳಿಯಲ್ಲಿ ಆಳ್ವಾಸ್ ವಿರಾಸತ್ ರಂಗು: ವಿಜಯ್ ಪ್ರಕಾಶ್, ಶ್ರೇಯಾ ಘೋಷಾಲ್ ಸಂಗೀತ ರಸಸಂಜೆ
ಈ ವಾರಾಂತ್ಯಕ್ಕೆ ಕರಾವಳಿಯಲ್ಲಿ ಆಳ್ವಾಸ್ ವಿರಾಸತ್ ರಂಗು: ವಿಜಯ್ ಪ್ರಕಾಶ್, ಶ್ರೇಯಾ ಘೋಷಾಲ್ ಸಂಗೀತ ರಸಸಂಜೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಡಿಸೆಂಬರ್ 14ರಿಂದ 17ರ ವರೆಗೆ ಮೂಡಬಿದಿರೆಯಲ್ಲಿ ಆಳ್ವಾಸ್ ವಿರಾಸತ್ ನಡೆಯಲಿದೆ. ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ 29ನೇ ಆವೃತ್ತಿಯಾಗಿರುವ ಈ ಬಾರಿಯ ವಿರಾಸತ್‌ನಲ್ಲಿ ವಿಜಯ್ ಪ್ರಕಾಶ್ ಮತ್ತು ಶ್ರೇಯಾ ಘೋಷಾಲ್ ಅವರ ಸಂಗೀತ ರಸಸಂಜೆ ವಿಶೇಷ ಆಕರ್ಷಣೆಯಾಗಲಿದೆ.
7 ಮೇಳಗಳ ಮೂಲಕ ಕಳೆ ಕಟ್ಟಲಿರುವ ವಿರಾಸತ್‌ನಲ್ಲಿ ಭಾಗವಹಿಸುವುದೇ ಕಲಾ ರಸಿಕರಿಗೆ ಒಂದು ಅಪೂರ್ವ ಅನುಭವವಾಗಿದೆ.
ಅನ್ವೇಷಣಾತ್ಮಕ ಕೃಷಿಕ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ಆವರಣದಲ್ಲಿ ಏಳು ಮೇಳಗಳನ್ನು ಏರ್ಪಡಿಸಲಾಗಿದೆ.
ಉದ್ಘಾಟನಾ ಸಮಾರಂಭ ಹಾಗೂ ಭವ್ಯ ಸಾಂಸ್ಕೃತಿಕ ಮೆರವಣಿಗೆ ಮೂಲಕ ಆಳ್ವಾಸ್ ವಿರಾಸತ್ ಕರಾವಳಿಯಲ್ಲಿ ಸಾಂಸ್ಕೃತಿಕ ಪ್ರಿಯರಿಗೆ ತೆರೆದುಕೊಳ್ಳಲಿದೆ. ಆ ಬಳಿಕ ನಡೆಯುವ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ ಮಿಂಚಿನ ಸಂಚಲನ ಉಂಟು ಮಾಡಲಿದೆ.