ಮಂಗಳೂರು: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್
Friday, December 29, 2023
ಮಂಗಳೂರು: ನಗರದ ಹೊರವಲಯದ ತಾರೆಮಾರ್ ಎಂಬಲ್ಲಿ ಗಂಜಿಮಠದಿಂದ ಮುತ್ತೂರು ಕಡೆಗೆ ಹೋಗುವ ರಸ್ತೆಯ ಬದಿಯ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 90 ML ನ ಒಟ್ಟು 24 ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿಸೆಂಬರ್ 27ರಂದು 5-45ರ ವೇಳೆಗೆ ಬಜಪೆ ಪೊಲೀಸ್ ಠಾಣೆಯ ಪಿಎಸ್ಐ ಕುಮಾರೇಶನ್ ರವರು ರೌಂಡ್ಸ್ ಕರ್ತವ್ಯದಲ್ಲಿದ್ದರು. ಈ ವೇಳೆ ಅವರು ಜಯಾನಂದ ಕುಲಾಲ್(48) ರವರ ಅಂಗಡಿಯ ಬಳಿ ಬಂದಿದ್ದಾರೆ. ಆಗ ಸಮವಸ್ತ್ರದಲ್ಲಿದ್ದ ಅವರನ್ನು ಕಂಡು ಅಂಗಡಿಯ ಬಳಿಯಿದ್ದ ಗಿರಾಕಿಗಳು ಓಡಿ ಹೋಗಿದ್ದಾರೆ. ಇದರಿಂದ ಅನುಮಾನಗೊಂಡ ಪಿ.ಎಸ್.ಐ ಜಯಾನಂದ್ ಕುಲಾಲ್ ರವರು ಅಂಗಡಿಯ ಒಳಗಡೆ ಹೋಗಿ ನೋಡಿದಾಗ ಶೋಕೇಸ್ ಅಡಿಯಲ್ಲಿ ಒಂದು ಪ್ಲಾಸ್ಟಿಕ್ ಕವರಿನಲ್ಲಿ 90 ML ನ ಒಟ್ಟು 24 ಮದ್ಯದ ಟೆಟ್ರಾ ಪ್ಯಾಕೇಟ್ ಗಳಿರುವುದು ಕಂಡು ಬಂದಿದೆ. ಮದ್ಯ ಮಾರಾಟದ ಬಗ್ಗೆ ಕೇಳಿದಾಗ ಪರವಾನಿಗೆ ಇಲ್ಲ ಎಂದು ತಿಳಿಸಿರುತ್ತಾರೆ.
ಅದರಂತೆ ಪಿ.ಎಸ್.ಐ.ರವರು ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಅಂಗಡಿಯ ಮಾಲಕ ಜಯಾನಂದ ಕುಲಾಲ್ ರವರನ್ನು ದಸ್ತಗಿರಿ ಮಾಡಿದ್ದಾರೆ. ಅಲ್ಲದೆ 24 ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು ಮದ್ಯ ಮಾರಾಟ ಮಾಡಿ 550/- ರೂಪಾಯಿ ನಗದನ್ನು ಸ್ವಾಧೀನಪಡಿಸಿಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.