BAJPE- ಮಾದಕ ವಸ್ತು ಸಾಗಾಟ- ಮೂವರ ಬಂಧನ
Saturday, December 23, 2023
ಮಂಗಳೂರು: ಬಜಪೆ ಠಾಣೆಯ ಪಿಎಸ್‌ಐ ಗುರಪ್ಪ ಕಾಂತಿ ಮತ್ತು ಅವರ ಸಿಬಂದಿ ಇಲ್ಲಿನ ಶಾಂತಿಗುಡ್ಡೆ ಚೆಕ್ ಪಾಯಿಂಟ್ ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್ ನಲ್ಲಿ ಮೂವರು ಬರುತ್ತಿದ್ದುದನ್ನು ನೋಡಿ ನಿಲ್ಲಿಸುವಂತೆ ಸೂಚನೆ ನೀಡಿದಾಗ ಬೈಕ್ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದಾಗ ಅವರನ್ನು ವಶಕ್ಕೆ ಪಡೆಯಲಾಯಿತು.
ಹೊಸಬೆಟ್ಟುವಿನ ಅಣ್ಣಪ್ಪಸ್ವಾಮಿ ಯಾನೆ ಮನು ಮಂಜೇಶ್ವರದ (23), ಮಂಜೇಶ್ವರದ ಮೊಹಮ್ಮದ್ ಜುನೈದ್ ಯಾನೆ ಜುನ್ನಿ (29) ಮತ್ತು ಕುಳಾಯಿಯ ಎಂ.ಕೆ. ಆಕಾಶ ಯಾನೆ ಮಾದವ ಕೌಶಲ್ಯ ಆಕಾಶ (24) ಬಂಧಿತರು. ಅವರನ್ನು ವಿಚಾರಣೆ ನಡೆಸಿದಾಗ ಮಾದಕವಸ್ತು ಎಂಡಿಎಂಎ
ಕ್ರಿಸ್ಟಲ್ ಅನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಹೋಗುತ್ತಿರುವುದಾಗಿ ತಿಳಿಸಿದ್ದರು. ಆರೋಪಿಗಳಿಂದ 30 ಸಾವಿರ ರೂ. ಮೌಲ್ಯದ6.27 ಗ್ರಾಂ ಎಂಡಿಎಂಎ ಕ್ರಿಸ್ಟಲ್, ಬೈಕ್ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.