BANTWAL-ಗ್ರಾಹಕರ ಸೋಗಿನಲ್ಲಿ ಬಂದು ಮಹಿಳೆಯ ಸರ ಕಳವು- ಇಬ್ಬರು ಅರೆಸ್ಟ್
ಮಂಗಳೂರು: ಬಿ.ಸಿ.ರೋಡು ಅಜ್ಜಿಬೆಟ್ಟಿನ ಅಂಗಡಿಯೊಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದು ಮಹಿಳೆಯರ ಕುತ್ತಿಗೆಯಿಂದ ಸರ ಎಳೆದು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ಬೈಕಂಪಾಡಿ ನಿವಾಸಿ ಅಶೋಕ(34) ಹಾಗೂ ದಂಬೇಲ್ ನಿವಾಸಿ ಸಚಿನ್ (34) ಬಂಧಿತರು.
ಇವರು ಬೈಕಿನಲ್ಲಿ ಹೆಲೈಟ್ ಧಾರಿಗಳಾಗಿ ಆಗಮಿಸಿ ಅದರಲ್ಲಿ ಓರ್ವ ಅಜ್ಜಿಬೆಟ್ಟಿನಲ್ಲಿ ಸರೋಜಿನಿಯವರ ಅಂಗಡಿಗೆ ಆಗಮಿಸಿ ಸಾಮಗ್ರಿ ಖರೀದಿಸಿ ಹಣ ನೀಡಿದ್ದರು. ಈ ವೇಳೆ ಸರೋಜಿನಿ ಅವರು ಚಿಲ್ಲರೆ ನೀಡುವುದಕ್ಕಾಗಿ ಕ್ಯಾಶ್ ಡ್ರಾಯರ್‌ಗೆ ಬಗ್ಗಿದಾಗ ಆರೋಪಿ ಆಕೆಯ ಒಂದೂವರೆ ಪವನಿನ ಸರವನ್ನು ಎಳೆದು ಪರಾರಿಯಾಗಿದ್ದರು.
ಪ್ರಕರಣದ ಆರೋಪಿಗಳನ್ನು ತ್ವರಿತ ಸಮಯದಲ್ಲಿ ಬಂಧಿಸುವಲ್ಲಿ ಬಂಟ್ವಾಳ ನಗರ ಪೊಲೀಸರು ಯಶಸ್ವಿಯಾಗಿದ್ದು, ಘಟನಾ ಸ್ಥಳದಲ್ಲಿ ಯಾವುದೇ ಸಿಸಿ - ಕೆಮರಾ ವ್ಯವಸ್ಥೆ ಆರೋಪಿಗಳ ಸುಳಿವು ಕೂಡ ಇಲ್ಲದೇ ಇದ್ದರೂ ಆರೋಪಿಗಳನ್ನು ಬಂಧಿಸಿರುವುದಕ್ಕೆ ಬಂಟ್ವಾಳ ನಗರ ಠಾಣಾ ಇನ್ಸ್‌ಪೆಕ್ಟರ್‌ತಂಡಕ್ಕೆ ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿಗಳು ಬಹುಮಾನವನ್ನು ಘೋಷಿಸಿದ್ದಾರೆ.
ಬಂಟ್ವಾಳ ಡಿವೈಎಸ್ಪಿ ವಿಜಯಪ್ರಸಾದ್ ಅವರ ನಿರ್ದೇಶನದಂತೆ ಬಂಟ್ವಾಳ ನಗರ ಇನ್‌ಸ್ಪೆಕ್ಟರ್ ಅನಂತಪದ್ಮನಾಭ ಅವರ ಮಾರ್ಗದರ್ಶನದಲ್ಲಿ ಪಿಎಸ್ ಐಗಳಾದ ರಾಮಕೃಷ್ಣ ಕಲೈಮಾರ್ ಅವರು ಆರೋಪಿಗಳನ್ನು ಬೆಂಜನಪದವು ಕರಾವಳಿ ಸೈಟ್ ಬಳಿ ವಶಕ್ಕೆ ಪಡೆಯುವಲ್ಲಿ, ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬಂದಿ ಇರ್ಷಾದ್ ಪಿ, ರಾಜೇಶ್ ಎಸ್, ಗಣೇಶ್ ಎನ್., ಮೋಹನ ವೈ.ಎ, ವಿವೇಕ್ ಕೆ. ಪಾಲ್ಗೊಂಡಿದ್ದರು.