-->
Belthangady- 7 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿ ಶರೀಫ್ ಬಂಧನ

Belthangady- 7 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿ ಶರೀಫ್ ಬಂಧನ

ಮಂಗಳೂರು: ವೇಣೂರು 'ಪೊಲೀಸ್ ಠಾಣೆಯಲ್ಲಿ 2016 ರಲ್ಲಿ ದಾಖಲಾದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸುಳ್ಯ ತಾಲೂಕಿನ ಐವತ್ತೋಕ್ಲು ಗ್ರಾಮದ ಪಂಜದ, ನೆಲ್ಲಿಕಟ್ಟೆ ನಿವಾಸಿ ದಿ। ಆದಂ ಪುತ್ರ ಶರೀಫ್ ಮಹಮ್ಮದ್ ಯಾನೆ ಶರೀಫ್ (43) ಬಂಧಿತ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ದಾಖಲಾದ ದೂರಿನಂತೆ ಈತ ಸುಮಾರು 6 ರಿಂದ7 ವರ್ಷಗಳಿಂದ ತನ್ನ ಸ್ವಂತ ವಿಳಾಸದಲ್ಲಿವಾಸಮಾಡದೆ ವಿವಿಧ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯಾಗಿದ್ದ. ಈತನನ್ನು ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ನಿರ್ದೇಶನದಂತೆ ವೇಣೂರು ಪೊಲೀಸ್ ಠಾಣೆಯ ಉಪನಿರೀಕಕಿ ಶೈಲಾ ಮತ್ತು ಆನಂದ್ ಎಂ.ನೇತೃತ್ವದ ಸಿಬಂದಿ ಡಿ. 21ರಂದು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ವಿಟ್ಲದ ಸಾರಡ್ಕ ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಆಬಳಿಕ ಬೆಳ್ತಂಗಡಿನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Ads on article

Advertise in articles 1

advertising articles 2

Advertise under the article