ನಿನ್ನನ್ನು ಮಾತನಾಡಿಸದ ಹಾಗೆ ಎಲ್ಲಾ ಕಡೆಗಳಿಂದಲೂ ಬ್ಲಾಕ್ ಮಾಡಿದ್ದಾರೆ: ಪುತ್ರನ ಹುಟ್ಟುಹಬ್ಬದಂದು ಶಿಖರ್ ಧವನ್ ಭಾವುಕ ಪೋಸ್ಟ್
Wednesday, December 27, 2023
ಹೊಸದಿಲ್ಲಿ: ತನ್ನ ಪತ್ನಿಯಿಂದ ವಿಚ್ಛೇದನ ಪಡೆದಿರುವ ಭಾರತದ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಪುತ್ರನ ಹುಟ್ಟುಹಬ್ಬವಾದ ಮಂಗಳವಾರ ಭಾವುಕರಾಗಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. "ನಿನ್ನನ್ನು (ಪುತ್ರನನ್ನು) ಮಾತನಾಡಿಸಿದ ಹಾಗೆ ಎಲ್ಲ ಕಡೆ ಬ್ಲಾಕ್ ಮಾಡಿದ್ದಾರೆ" ಎಂದು ಬರೆದುಕೊಂಡಿದ್ದಾರೆ.
ಪುತ್ರನ ಹುಟ್ಟುಹಬ್ಬಕ್ಕೆ ಇನ್ ಸ್ಟಾಗ್ರಾಂನಲ್ಲಿ ಶುಭಾಶಯ ತಿಳಿಸಿರುವ ಶಿಖರ್ ಧವನ್, "ನಿನ್ನನ್ನು ವೈಯಕ್ತಿಕವಾಗಿ ಭೇಟಿಯಾಗದೇ ಸುಮಾರು ಒಂದು ವರ್ಷವೇ ಕಳೆದಿದೆ. ಕಳೆದ 3 ತಿಂಗಳಿನಿಂದ ನಿನ್ನನ್ನು ಮಾತನಾಡಿಸದ ಹಾಗೆ ಎಲ್ಲ ಕಡೆಗಳಿಂದಲೂ ಬ್ಲಾಕ್ ಮಾಡಲಾಗಿತ್ತು. ಹುಟ್ಟುಹಬ್ಬವಾದ ಇಂದು ನಿನ್ನ ಹಳೆ ಪೋಟೊವನ್ನು ಪೋಸ್ಟ್ ಮಾಡುತ್ತಿರುವೆ. ಹುಟ್ಟುಹಬ್ಬದ ಶುಭಾಶಯಗಳು" ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಪತ್ನಿಯಿಂದ ವಿಚ್ಛೇದನ ಪಡೆದಿರುವ ಶಿಖರ್ ಧವನ್ ಗೆ ಪುತ್ರನನ್ನು ಖಾಯಂ ಕಸ್ಟಡಿಗೆ ತೆಗೆದುಕೊಳ್ಳಲು ನ್ಯಾಯಾಲಯ ಒಪ್ಪಿಗೆ ನೀಡಿರಲಿಲ್ಲ. ಆದರೆ, ಭಾರತ ಹಾಗೂ ಆಸ್ಟ್ರೇಲಿಯಕ್ಕೆ ಹೋಗಿ ಭೇಟಿ ಮಾಡಲು ಹಾಗೂ ವೀಡಿಯೊ ಕರೆ ಮಾಡಲು ಅವಕಾಶ ನೀಡಿತ್ತು.