-->
ಮಂಗಳೂರು: ರಾಂಗ್ ಸೈಡ್ ನಲ್ಲಿ ಬಸ್ ಸಂಚಾರ - ಚಾಲಕನ‌ ಅಟಾಟೋಪಕ್ಕೆ ಹಿಡಿಶಾಪ ಹಾಕಿದ ನೆಟ್ಟಿಗರು

ಮಂಗಳೂರು: ರಾಂಗ್ ಸೈಡ್ ನಲ್ಲಿ ಬಸ್ ಸಂಚಾರ - ಚಾಲಕನ‌ ಅಟಾಟೋಪಕ್ಕೆ ಹಿಡಿಶಾಪ ಹಾಕಿದ ನೆಟ್ಟಿಗರು

ಮಂಗಳೂರು: ರಾಂಗ್ ಸೈಡ್ ನಲ್ಲಿ ಅಪಾಯಕಾರಿಯಾಗಿ ಬಸ್ ಡ್ರೈವ್ ಮಾಡಿರುವ ವೀಡಿಯೋ ಒಂದು ವೈರಲ್ ಆಗಿದ್ದು, ನೆಟ್ಟಿಗರು ಹಿಡಿಶಾಪ ಹಾಕುತ್ತಿದ್ದಾರೆ.

ಮಂಗಳೂರಿನಿಂದ ಮೂಡಬಿದಿರೆ - ಕಾರ್ಕಳ ದಾರಿಯಾಗಿ ಸಂಚರಿಸುವ ಜೈನ್ ಟ್ರಾವೆಲ್ಸ್ ಬಸ್ ಅಪಾಯಕಾರಿಯಾಗಿ ರಾಂಗ್ ಸೈಡ್ ನಲ್ಲಿ ಸಂಚರಿಸಿದೆ‌. ಚಾಲಕ ಅತೀ ವೇಗದಿಂದ ಬಸ್ ಅನ್ನು ಚಲಾಯಿಸಿ ಇತರ ವಾಹನಗಳಿಗೆ ಅಪಾಯ ತಂದೊಡ್ಡುತ್ತಿದ್ದಾನೆ. ಈ ಬಸ್ ಚಾಲಕನ ದುರ್ವತನೆಯನ್ನು ನೋಡಿ ಜನರು ಬೆಚ್ಚಿಬಿದ್ದಿದ್ದಾರೆ. ಅಪಾಯಕಾರಿಯಾಗಿ ಬಸ್ ಸಂಚರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.‌ ಈ ವೀಡಿಯೋ ನೋಡಿ ಬಸ್ ಚಾಲಕನ ವಿರುದ್ಧ ನೆಟ್ಟಿಗರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.




Ads on article

Advertise in articles 1

advertising articles 2

Advertise under the article