ಲೇಡಿಸ್ ಹಾಸ್ಟೆಲ್ ಬಾತ್ ರೂಮ್‌ನಲ್ಲಿ ವೈಫೈ CAMERA
Thursday, December 21, 2023
ಜೇವರ್ಗಿ: ಪಟ್ಟಣದ ಅಲ್ಪಸಂಖ್ಯಾಕರ ಲೇಡಿಸ್ ವಸತಿ ನಿಲಯದ ಬಾತ್ ರೂಮ್‌ಗೆ ವೈಫೈ ಸಿಸಿ ಕೆಮರಾ ಅಳವಡಿಸಿ ವಿಕೃತಿ ಮೆರೆದ ಮೂರು ಮಕ್ಕಳ ತಂದೆಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ವಸತಿ ನಿಲಯಕ್ಕೆ ಕೆಮರಾ ಅಳವಡಿಸಿದ ವ್ಯಕ್ತಿಯನ್ನು ಸಲೀಂ ಅಲಿ ಹುಸೇನ್ ಬಾಷಾ ಎಂದು ಗುರುತಿಸಲಾಗಿದೆ.
ವಸತಿ ನಿಲಯದ ಪಕ್ಕದ ಕಟ್ಟಡದಲ್ಲಿ ಬಾಡಿಗೆ ಪಡೆದಿದ್ದ ಆರೋಪಿ ಮೂಲತಃ ತಾಲೂಕಿನ ಮಂದೇವಾಲ ಗ್ರಾಮದವನಾಗಿದ್ದು, ಬಳ್ಳೋಳ್ಳಿ ವ್ಯಾಪಾರ ಮಾಡಿಕೊಂಡು ಜೇವರ್ಗಿಯಲ್ಲಿ ವಾಸಿಸುತ್ತಿದ್ದ. ಪಕ್ಕದ ವಸತಿ ನಿಲಯದ ಬಾತ್ ರೂಮ್‌ಗೆ ಪೈಪ್ ಬಳಸಿ, ಅದಕ್ಕೆ ಎರಡು ರೂ. ನಾಣ್ಯಕ್ಕೆ ಟೇಪ್ ಮುಖಾಂತರ ಅಂಟಿಸಿ ವೈಫೈ ಸಿಸಿ ಕೆಮರಾ ಅಳವಡಿಸಿದ್ದ.
ಅದೃಷ್ಟವಶಾತ್ ಇದು ವಿದ್ಯಾರ್ಥಿನಿಯರ ಕಣ್ಣಿಗೆ ಬಿದ್ದು, ವಸತಿ ನಿಲಯದ ಮೇಲ್ವಿಚಾರಕರ ಗಮನಕ್ಕೆ ತಂದಾಗ ಮೇಲ್ವಿಚಾರಕರು ಆರೋಪಿಯನ್ನು ಥಳಿಸಿ ಪೊಲೀಸರ
ಸುಪರ್ದಿಗೆ ಒಪ್ಪಿಸಿದ್ದಾರೆ.