ಮಂಗಳೂರು: ಪೈಯಿಂಟಿಂಗ್ ವೃತ್ತಿ ಮಾಡುತ್ತಿದ್ದ ಕಾರ್ಮಿಕ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿ ಮೃತ್ಯು
Thursday, December 7, 2023
ಮಂಗಳೂರು: ಪೈಯಿಂಟಿಂಗ್ ಮಾಡುತ್ತಿದ್ದಾಗಲೇ ಏಣಿಗೆ ವಿದ್ಯುತ್ ಪ್ರವಹಿಸಿ ಕಾರ್ಮಿಕ ಮೃತಪಟ್ಟ ಘಟನೆ ಅಳಪೆ ಗ್ರಾಮದ ಶಿಲ್ಪ ಪಡ್ಪುವಿನಲ್ಲಿ ಸಂಭವಿಸಿದೆ.
ವಳಚ್ಚಿಲ್ ಪದವು ನಿವಾಸಿ ಜೈನುದ್ದೀನ್ ಅಬ್ದುಲ್ ರೆಹಮಾನ್ (43) ಮೃತಪಟ್ಟ ದುರ್ದೈವಿ.
ಜೈನುದ್ದೀನ್ ಅಬ್ದುಲ್ ರೆಹಮಾನ್ ಅವರು ಹೆನ್ರಿ ಡಿಸೋಜಾರ ಮನೆಯಲ್ಲಿ ಪೈಯಿಂಟಿಂಗ್ ಕೆಲಸ ಮಾಡುತ್ತಿದ್ದರು. ಅವರು ಮೇಲ್ಛಾವಣಿಗೆ ಕಬ್ಬಿಣದ ಏಣಿ ಮೇಲೆ ನಿಂತು ಪೈಯಿಂಟಿಂಗ್ ಮಾಡುತ್ತಿದ್ದಾಗ ಪಕ್ಕದಲ್ಲಿದ್ದ ಹೈಟೆನ್ಷನ್ ತಂತಿ ಸ್ಪರ್ಶಿಸಿದೆ. ಈ ವೇಳೆ ವಿದ್ಯುತ್ ಶಾಕ್ ಗೊಳಗಾಗಿ ಅವರು ಮೇಲಿನಿಂದ ಕೆಳಗೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರೊಂದಿಗೆ ಕೆಲಸ ಮಾಡುತ್ತಿದ್ದವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೆಹಮಾನ್ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.