-->
ಮಂಗಳೂರು: ಅಪರೇಷನ್ ಕಮಲನೂ ಮಾಡ್ತಾರೆ ಇರುವವರನ್ನೂ ಕಳಿಸ್ತಾರೆ - ಈಶ್ವರಪ್ಪ ಹೇಳಿಕೆಗೆ ದಿನೇಶ್ ಗುಂಡೂರಾವ್ ಟಾಂಗ್

ಮಂಗಳೂರು: ಅಪರೇಷನ್ ಕಮಲನೂ ಮಾಡ್ತಾರೆ ಇರುವವರನ್ನೂ ಕಳಿಸ್ತಾರೆ - ಈಶ್ವರಪ್ಪ ಹೇಳಿಕೆಗೆ ದಿನೇಶ್ ಗುಂಡೂರಾವ್ ಟಾಂಗ್


ಮಂಗಳೂರು: ಕಾಂಗ್ರೆಸ್ ಮುಕ್ತ ಮಾಡಿದ್ದೇವೆ ಎಂದು ಹೇಳಿಕೊಂಡು ತಿರುಗುತ್ತಿದ್ದ ಬಿಜೆಪಿಯೇ ಈಗ ಮುಕ್ತ ಆಗುತ್ತಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಆದರೂ ಸದ್ಯ‌ ದ.ಕ.ಭಾರತದಲ್ಲಿ ಬಿಜೆಪಿ ಮುಕ್ತ ಆಗಿದೆ. ಆದ್ದರಿಂದ ಕಾಂಗ್ರೆಸ್ ಮುಕ್ತ ಅನ್ನುವ ಮಾತು ಬಿಡಲಿ, ಬಿಜೆಪಿಯೇ ಮುಕ್ತ‌ ಆಗ್ತಿದೆ ಎಂದು ಮಂಗಳೂರಿನಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ 
ಹೇಳಿದರು.

ಪಂಚರಾಜ್ಯ ಚುನಾವಣಾ ಫಲಿತಾಂಶ ಲೋಕಸಭೆಗೆ ದಿಕ್ಸೂಚಿ ವಿಚಾರದಲ್ಲಿ ಮಾತನಾಡಿದ ಅವರು, ಜನರು ಬದಲಾವಣೆ ಬಯಸುತ್ತಿದ್ದಾರೆ.‌ ಕೇಂದ್ರ ಸರ್ಕಾರ ವೈಭವೀಕರಣ ಮಾಡುತ್ತಿದೆ‌. ಆದ್ದರಿಂದ ಈ ಅಸೆಂಬ್ಲಿ ರಿಸಲ್ಟ್ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ. ಪಂಚರಾಜ್ಯ ಫಲಿತಾಂಶದಲ್ಲಿ ‌ಕಾಂಗ್ರೆಸ್ ತೀವ್ರ ಪೈಪೋಟಿ ಕೊಟ್ಟಿದೆ ಎಂದು ಹೇಳಿದರು.

ಜಗದೀಶ್ ಶೆಟ್ಟರ್ ಬಿಜೆಪಿಗೆ ಮತ್ತೆ ವಾಪಾಸ್ ಬಗ್ಗೆ ಈಶ್ವರಪ್ಪ ಹೇಳಿಕೆ ವಿಚಾರದಲ್ಲಿ ಮಾತನಾಡಿ, ಈಶ್ವರಪ್ಪ ಹೇಳಿಕೆ ಕೊಡೋದ್ರಲ್ಲಿ ನಿಸ್ಸೀಮರು. ತಾನು ಪಕ್ಷ ಬಿಡಲು ಈಶ್ವರಪ್ಪವರೇ ಕಾರಣವೆಂದು ಜಗದೀಶ್ ಶೆಟ್ಟರ್ ಆವತ್ತೇ ಹೇಳಿದ್ದರು‌. ಬೇರೆ ಪಕ್ಷದವರನ್ನು ಅಪರೇಷನ್ ಕಮಲ ಮಾಡಿ ತಮ್ಮ ಪಕ್ಷಕ್ಕೆ ತೆಗೆದುಕೊಂಡು, ಅವರು ಮತ್ತೆ ಅವರ ಪಕ್ಷಕ್ಕೆ ಹೋಗುವಾಗ ಅವರು ಒಪ್ಕೊಬೇಕು. ಅಪರೇಷನ್ ಕಮಲನೂ ಮಾಡುತ್ತಾರೆ. ಇರುವವರನ್ನೂ ಕಳಿಸ್ತಾರೆ. ಒಂದು ಕಡೆ ಇರಿ. ಅಥವಾ ಹೊರಗಿನವರನ್ನು ಸೇರಿಸಬೇಡಿ. ಇರುವವರನ್ನು ಕಳುಹಿಸಬೇಡಿ ಎಂದು ಟಾಂಗ್ ನೀಡಿದರು.

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಹೆಚ್ಚಳ ವಿಚಾರದಲ್ಲಿ ಮಾತನಾಡಿ, ನೈತಿಕ ಪೊಲೀಸ್ ಗಿರಿ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದೇವೆ.‌ ಯಾರೂ ಕಾನೂನು ಕೈಗೆತ್ತಿಕೊಳ್ಳದಂತೆ ತಡೆಯಲು ಹೇಳಿದ್ದೇವೆ.‌ ಕೋಮುವಾದ, ನೈತಿಕ ಪೊಲೀಸ್ ಗಿರಿ ಅಗತ್ಯ ಇಲ್ಲ. ಜನರಿಗೆ ಜೀವನ ನಡೆಸಲು ಅಭಿವೃದ್ಧಿಬೇಕು. ಅದಷ್ಟೇ ಈಗಿನ ಅಗತ್ಯ. ಪ್ರಜಾಪ್ರಭುತ್ವದಲ್ಲಿ ಬೇರೆ ಏನೂ ಮಾಡಲು ಅವಕಾಶ ಇಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Ads on article

Advertise in articles 1

advertising articles 2

Advertise under the article