-->
ಪಾಕ್ ಚುನಾವಣಾ ಸ್ಪರ್ಧಾ ಕಣದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡ ಹಿಂದೂ ಮಹಿಳೆ

ಪಾಕ್ ಚುನಾವಣಾ ಸ್ಪರ್ಧಾ ಕಣದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡ ಹಿಂದೂ ಮಹಿಳೆ


ಇಸ್ಲಮಾಬಾದ್‌: ಪಾಕ್ ದೇಶದ ಚುನಾವಣೆ ಹೊಸ ವರ್ಷಕ್ಕೆ ಆಗಲಿದೆ. ಚುನಾವಣಾ ಕಣ ರಂಗೇರುತ್ತಿದೆ‌. ಆದರೆ ವಿಶೇಷ ಬೆಳವಣೆಗೆಯೆಂದರೆ ಇದೇ ಮೊದಲ ಬಾರಿಗೆ 2024ರ ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೂ ಮಹಿಳೆಯೊಬ್ಬರು ನಾಮಪತ್ರ ಸಲ್ಲಿಸಿದ್ದಾರೆ.

ಖೈಬ‌ರ್ ಪಡ್ಕೊಂಕ್ವಾದ ಬುನೇರ್ ಜಿಲ್ಲೆಯ ನಿವಾಸಿ ಡಾ. ಸವೀರಾ ಪ್ರಕಾಶ್ `ಸಾಮಾನ್ಯ ಕ್ಷೇತ್ರ'ಕ್ಕೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ತನ್ನ ಉಮೇದುವಾರಿಕೆಗೆ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಅನುಮೋದನೆ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಿವೃತ್ತ ವೈದ್ಯರಾಗಿರುವ ಅವರ ತಂದೆ ಓಂಪ್ರಕಾಶ್ ಕಳೆದ 35 ವರ್ಷದಿಂದ ಪಿಪಿಪಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.

ಪಾಕಿಸ್ತಾನ ಚುನಾವಣಾ ಆಯೋಗದ ಇತ್ತೀಚಿನ ತಿದ್ದುಪಡಿಯ ಪ್ರಕಾರ, ಸಾಮಾನ್ಯ ಕ್ಷೇತ್ರಗಳಲ್ಲಿ 5% ಸೀಟುಗಳನ್ನು ಮಹಿಳೆಯರಿಗೆ ಕಡ್ಡಾಯವಾಗಿ ಮೀಸಲಿಡಬೇಕು ಎಂದಿದೆ. ಆದ್ದರಿಂದ ಈ ಸ್ಪರ್ಧಕಣಾದಲ್ಲಿ ಡಾ. ಸವೀರಾ ಪ್ರಕಾಶ್ ಕಾಣಿಸಿಕೊಳ್ಳಲು ಸಾಧ್ಯವಾಗಿದೆ. ಪಾಕಿಸ್ತಾನದಲ್ಲಿ 2024ರ ಫೆಬ್ರವರಿ 8ರಂದು ಸಾರ್ವತ್ರಿಕ ಚುನಾವಣೆ ನಿಗದಿಯಾಗಿದೆ.

Ads on article

Advertise in articles 1

advertising articles 2

Advertise under the article