ಪತಿಗೆ ಡೈವೋರ್ಸ್ ನೀಡಿದ ನಟಿ ಇಶಾ ಕೊಪ್ಪಿಕರ್
Thursday, December 28, 2023
ಬಾಲಿವುಡ್ ನಟಿ ಇಶಾ ಕೊಪ್ಪಿಕರ್ ಮತ್ತು ಉದ್ಯಮಿ ಟಿಮ್ಮಿ ನಾರಂಗ್ ನಡುವಿನ 14 ವರ್ಷಗಳ ದಾಂಪತ್ಯ ಜೀವನ ವಿಚ್ಚೇದನದಲ್ಲಿ ಅಂತ್ಯಗೊಂಡಿದೆ.
ಈಗ ನಟಿಯು ತಮ್ಮ 9 ವರ್ಷದ ಪುತ್ರಿಯೊಂದಿಗೆ ತವರು ಮನೆಗೆ ಬಂದಿದ್ದಾರೆ. ಕೆಲವು ವರ್ಷಗಳಿಂದ ಇವರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಈ ಮದುವೆ ಉಳಿಸಿಕೊಳ್ಳಲು ಅವರು ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿ ಡಿವೋರ್ಸ್ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಶಕದ ಹಿಂದೆ ಜಿಮ್‌ನಲ್ಲಿ ಭೇಟಿಯಾಗಿದ್ದ ಇವರು, ಆಮೇಲೆ ಮೂರು ವರ್ಷ ಸ್ನೇಹಿತರಾಗಿ, ನಂತರ ಪರಸ್ಪರ ಪ್ರೀತಿಸಿ, 2009ರಲ್ಲಿ ಮದುವೆಯಾಗಿದ್ದರು. ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಇಶಾ ಕೊಪ್ಪಿಕರ್ ಬಾಲಿವುಡ್ ಮತ್ತು ಕಾಲಿವುಡ್ ಸಿನಿಮಾಗಳಲ್ಲೂ ಗುರುತಿಸಿಕೊಂಡಿದ್ದಾರೆ.