KSRTC ಅಪಘಾತದಿಂದ ಮೃತಪಟ್ಟವರಿಗೆ 10 ಲಕ್ಷ ಪರಿಹಾರ
Thursday, December 28, 2023
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಅಪಘಾತಕ್ಕೀಡಾಗಿ ಮೃತಪಟ್ಟ ಪ್ರಯಾಣಿಕರ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡುವ ಸದುದ್ದೇಶದಿಂದ ಪರಿಹಾರ ಮೊತ್ತವನ್ನು ₹ 3 ಲಕ್ಷದಿಂದ ₹ 10 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಸರಕಾರ ಪ್ರಕಟಿಸಿದೆ.
₹ 49ಕ್ಕಿಂತ ಕಡಿಮೆ ಮುಖಬೆಲೆಯ ಟಿಕೆಟ್‌ಗೆ ಯಾವುದೇ ಅಪಘಾತ ಪರಿಹಾರ ನಿಧಿ ವಂತಿಕೆ ಇರುವುದಿಲ್ಲ. ₹ 50ರಿಂದ ₹ 100ರ ವರೆಗಿನ ಮುಖ ಬೆಲೆ ಟಿಕೆಟ್‌ಗೆ ₹ 1 ಹಾಗೂ ₹ 100ಕ್ಕಿಂತ ಹೆಚ್ಚು ಮುಖ ಬೆಲೆ ಟಿಕೆಟ್‌ಗೆ ₹ 2 ಅಪಘಾತ ಪರಿಹಾರ ನಿಧಿ ವಂತಿಕೆಯಾಗಿ ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದೆ.