ಪೊಲೀಸ್ ಠಾಣೆ ಮೆಟ್ಟಿಲೇರಿದ ಕ್ರಿಕೆಟಿಗನ LOVE STORY
ಬೆಂಗಳೂರು: ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ ಮತ್ತು ಅವರ ಮಾಜಿ ಪ್ರೇಯಸಿ ಪ್ರೇಮ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಆಕೆ ತನ್ನ ಮನೆಗೆ ಅತಿಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೆ.ಸಿ.ಕಾರಿಯಪ್ಪ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮತ್ತೊಂದೆಡೆ ಯುವತಿ, ಕೆ.ಸಿ.ಕಾರಿಯಪ್ಪ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಗರ್ಭಪಾತ ಮಾಡಿಸಿ ವಂಚಿಸಿದ್ದಾರೆಂದು ಆರೋಪಿಸಿ R t ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
`ಆಕೆ ಡ್ರಗ್ಸ್ ವ್ಯಸನಿ. ಜತೆಗೆ ಮದ್ಯ ಕೂಡ ಸೇವಿಸುತ್ತಾಳೆ. ಇದರಿಂದ ಹೊರಬರುವಂತೆ ಹಲವು ಬಾರಿ ಹೇಳಿದ್ದೆ. ಇಲ್ಲವಾದರೆ ನನ್ನ ಕ್ರಿಕೆಟ್ ವೃತ್ತಿ ಜೀವನಕ್ಕೆ ತೊಂದರೆಯಾಗಲಿದೆ ಎಂದೂ ಹೇಳಿದ್ದೆ. ಇಬ್ಬರ ಪೋಷಕರೂ ಆಕೆಗೆ ಬುದ್ದಿವಾದ ಹೇಳಿದ್ದರು.
ಆದರೂ ಸುಧಾರಿಸಿಕೊಳ್ಳಲಿಲ್ಲ. ಆಕೆ ಈ ಹಿಂದೆ ಡಿವೋರ್ಸ್ ಆಗಿರುವ ವಿಚಾರ ನನಗೆ ಗೊತ್ತಿರಲಿಲ್ಲ ಈಗ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ. ಈಕೆಯಿಂದ ನನ್ನ ಕ್ರಿಕೆಟ್ ವೃತ್ತಿ ಜೀವನ ಹಾಳಾಗುತ್ತಿದೆ ಎಂದು ಕೆ.ಸಿ.ಕಾರಿಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಕಾರಿಯಪ್ಪನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಗರ್ಭವತಿಯಾಗಿದ್ದೆ. ಇಷ್ಟು ಬೇಗ ಬೇಡ ಎಂದು ಮಾತ್ರೆ ನುಂಗಿಸಿ ಗರ್ಭಪಾತ ಮಾಡಿಸಿದ್ದಾನೆ. ಆತನಿಗೆ ಬೇರೆ ಹುಡುಗಿಯರ ಜತೆಗೆ ಸಂಬಂಧವಿದೆ. ಆತ ಮಾದಕ ವ್ಯಸನಿ. ಮದ್ಯವನ್ನೂ ಸೇವಿಸುತ್ತಾನೆ. ನನಗೆ ಮಾನಸಿಕ, ದೈಹಿಕವಾಗಿ ಸಾಕಷ್ಟು ತೊಂದರೆ ನೀಡಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ
ವಂಚಿಸಿದ್ದಾನೆ ಎಂದು ಸಂತ್ರಸ್ತೆ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಎರಡೂ ದೂರುಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.