-->
ಮಾಲ್ಡೀವ್ಸ್ ಪ್ರವಾಸದಲ್ಲಿ ರಜೆ ಕಳೆದಿದ್ದ ವಿಜಯ್ ದೇವರಕೊಂಡ - ರಶ್ಮಿಕಾ‌ ಮಂದಣ್ಣ ಫೋಟೋಗಳ ಸಾರ್ವಜನಿಕ ಪ್ರದರ್ಶನ...! ನಟಿ ಮೃಣಾಲ್‌ ಠಾಕೂರ್ ಶಾಕ್

ಮಾಲ್ಡೀವ್ಸ್ ಪ್ರವಾಸದಲ್ಲಿ ರಜೆ ಕಳೆದಿದ್ದ ವಿಜಯ್ ದೇವರಕೊಂಡ - ರಶ್ಮಿಕಾ‌ ಮಂದಣ್ಣ ಫೋಟೋಗಳ ಸಾರ್ವಜನಿಕ ಪ್ರದರ್ಶನ...! ನಟಿ ಮೃಣಾಲ್‌ ಠಾಕೂರ್ ಶಾಕ್



ವಿಶಾಖಪಟ್ಟಣಂ: ಸ್ಟಾರ್ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ‌ ಮಂದಣ್ಣ ಇತ್ತೀಚೆಗೆ ಮಾಲ್ಡೀವ್ಸ್​ಗೆ ಪ್ರವಾಸ ಹೊರಟಿದ್ದರು. ಈ ವೇಳೆ ತೆಗೆದ ಇಬ್ಬರ ಫೋಟೊಗಳನ್ನು ‘ಹಾಯ್ ನಾನ್ನಾ’ ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿದೆ. ಇದರಿಂದ ಆ ಸಿನಿಮಾದ ನಟಿ ಮೃಣಾಲ್ ಶಾಕ್​ ಆಗಿದ್ದಾರೆ.

‘ಹಾಯ್ ನಾನ್ನಾ’ ಸಿನಿಮಾ ಪ್ರಚಾರ ಕಾರ್ಯಕ್ರಮ ವಿಶಾಖಪಟ್ಟಣಂನಲ್ಲಿ ಆಯೋಜಿಸಲಾಗಿತ್ತು. ಈ ಸಿನಿಮಾದಲ್ಲಿ ನಾನಿ ಮತ್ತು ಮೃಣಾಲ್ ಠಾಕೂರ್ ನಾಯಕ ನಟ - ನಟಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಅಥವಾ ವಿಜಯ್ ಯಾರೂ ಈ ಚಿತ್ರದ ಭಾಗವಾಗಿಲ್ಲ. ಆದರೂ ಅವರಿಬ್ಬರು ಖಾಸಗಿಯಾಗಿ ಪಾಲ್ಗೊಂಡಿದ್ದರು ಎನ್ನಲಾದ ಫೋಟೊಗಳನ್ನು ಬೃಹತ್​ ಪರದೆ ಮೇಲೆ ಪ್ರದರ್ಶಿಸಿದ್ದಾರೆ. ಇದನ್ನು ನೋಡಿ ಮೃಣಾಲ್ ಠಾಕೂರ್ ಆಘಾತ ಮತ್ತು ಆಶ್ಚರ್ಯಚಕಿತರಾದರು.

ಇದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಕಾರ್ಯಕ್ರಮದಲ್ಲಿ ವಿಜಯ್-ರಶ್ಮಿಕಾ ಅವರ ಫೋಟೊಗಳನ್ನು ಪರದೆಯ ಮೇಲೆ ಸಾರ್ವಜನಿಕವಾಗಿ ಏಕೆ ತೋರಿಸಲಾಯಿತು. ಇದಕ್ಕೂ ಆ ಚಿತ್ರಕ್ಕೂ ಏನು ಸಂಬಂಧ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಈ ಎಲ್ಲ ಬೆಳವಣಿಗೆಗಳು ‘ಹಾಯ್ ನಾನ್ನಾ’ ಸಿನಿಮಾದ ಬಿಡುಗಡೆಯ ಪ್ರೀ - ರಿಲೀಸ್ ಕಾರ್ಯಕ್ರಮ ವಿವಾದವನ್ನು ಹುಟ್ಟುಹಾಕಿದೆ. ಸೆಲೆಬ್ರಿಟಿಗಳಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮಾಲ್ಡೀವ್ಸ್ ನ ಫೋಟೊಗಳನ್ನು ದೊಡ್ಡ ಪರದೆಯ ಮೇಲೆ ಪ್ರದರ್ಶಿಸುವಾಗ ಅವರಿಂದ ಅನುಮತಿ ಪಡೆದಿದೆಯೇ ಅಥವಾ ಅವರ ಒಪ್ಪಿಗೆಯಿಲ್ಲದೆ ಚಿತ್ರಗಳನ್ನು ಬಳಸಸಲಾಗಿದೆಯೇ ಎಂಬುದು ತಿಳಿದಿಲ್ಲ.

ಕಾರ್ಯಕ್ರಮದ ನಿರೂಪಕಿ ಸುಮಾ ಕೆಲವು ಚಿತ್ರಗಳನ್ನು ಪ್ರದರ್ಶಿಸುವ ಬಗ್ಗೆ ಸಂಘಟಕರನ್ನು ಪ್ರಶ್ನಿಸಿದಾಗ ಅಹಿತಕರ ಪರಿಸ್ಥಿತಿಗೆ ಕಾರಣವಾಯಿತು. ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ, ಇದನ್ನು ‘ಅಗ್ಗದ ಪ್ರಚಾರದ ಸ್ಟಂಟ್’ ಎಂದು ಕರೆದಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಜೊತೆಗೆ ಚಿತ್ರದ ತಾರೆಯರಾದ ನಾನಿ ಮತ್ತು ಮೃಣಾಲ್ ಪರಿಸ್ಥಿತಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Ads on article

Advertise in articles 1

advertising articles 2

Advertise under the article