Mangalore-ಬಾಲಕಿಯ ಅಪಹರಣ ಅತ್ಯಾಚಾರ ಪ್ರಕರಣ- ಆರೋಪಿ ಖುಲಾಸೆ
Saturday, December 23, 2023
ಮಂಗಳೂರು: ಪರಿಶಿಷ್ಟ ಸಮುದಾಯಕ್ಕೆ ಸೇರಿದ ಅಪ್ರಾಪ್ತ ವಯಸ್ಕ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ ಆರೋಪಿಯನ್ನು ಸಾಕ್ಷಾ ಧಾರಗಳ ಕೊರತೆಯಿಂದ ಮಂಗಳೂರಿನ ದ.ಕ. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಮೊದಲನೇ ಫಾಸ್ಟ್‌ಟ್ಯಾಕ್) ಖುಲಾಸೆಗೊಳಿಸಿ ತೀರ್ಪಿತ್ತಿದೆ.
ಆರೋಪಿ ಎಂ.ಡಿ. ಇಬ್ರಾರ್ ಅಲಿಯಾಸ್ ಮುನ್ನ ಖುಲಾಸೆಗೊಂಡವರು. ಇವರ ವಿರುದ್ದ ನೊಂದ ಬಾಲಕಿ ನೀಡಿದ್ದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2019ರ ಮಾರ್ಚ್‌ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಯನ್ನು ಉಳ್ಳಾಲ ಪೊಲೀಸ್ ಠಾಣೆಯವರು
ದಸ್ತಗಿರಿ ಮಾಡಿ ಕಾನೂನು ಕ್ರಮವನ್ನು ಕೈಗೊಂಡಿದ್ದರು. ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ಕೈಗೊಳ್ಳಲಾಗಿದ್ದು 16 ಸಾಕ್ಷಿಗಳ ವಿಚಾರಣೆ ಮಾಡಲಾಗಿತ್ತು. ಆರೋಪಿ ಪರ ಹಾಗೂ ಅಭಿಯೋಜಕರ ಪರ ನ್ಯಾಯಾಲಯದಲ್ಲಿ ವಾದ ಹಾಗೂ ಪ್ರತಿವಾದ ಮಂಡನೆ ಆಗಿದ್ದು, ಅದರಂತೆ ನ್ಯಾಯಾಧೀಶೆ ಮಂಜುಳ ಇಟ್ಟಿ ಅವರು ಡಿ. 19ರಂದು ಆರೋಪಿ ವಿರುದ್ಧ ಸೂಕ್ತ ಸಾಕ್ಷ್ಯಾಧಾರವಿಲ್ಲದ ಕಾರಣ ಖುಲಾಸೆಗೊಳಿಸಲಾಗಿದೆ ಎಂದು ತೀರ್ಪು ನೀಡಿದ್ದಾರೆ. ಆರೋಪಿ ಪರ ವಕೀಲರಾದ ರಾಘವೇಂದ್ರ ರಾವ್, ಗೌರಿ ಶೆಣೈ ಮತ್ತು ನವ್ಯಾ ಸಚಿನ್ ವಾದಿಸಿದ್ದರು.