ಭಾರತ ಮುಸ್ಲಿಮರಿಗೆ ಸ್ವರ್ಗ: ನರೇಂದ್ರ ಮೋದಿ
Friday, December 22, 2023
ಹೊಸದಿಲ್ಲಿ: 'ಬೇರೆ ರಾಷ್ಟ್ರಗಳಲ್ಲಿ ಕಿರುಕುಳವನ್ನು ಎದುರಿಸುತ್ತಿದ್ದರೂ, ಮುಸ್ಲಿಮರು ಭಾರತದಲ್ಲಿ 'ಸುರಕ್ಷಿತ ಸ್ವರ್ಗ'ವನ್ನೇ ಕಂಡುಕೊಂಡಿದ್ದಾರೆ. ಇದು ಭಾರತದ ಸಮಾ 'ಜವು ಯಾವುದೇ ಧಾರ್ಮಿಕ ಅಲ್ಪಸಂಖ್ಯಾಕರ ಬಗ್ಗೆ ತಾರತಮ್ಯ ಹೊಂದಿಲ್ಲ ಎಂಬುದಕ್ಕೆ ನಿದರ್ಶನ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಫೈನಾನ್ಶಿಯಲ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮೋದಿ ಅವರನ್ನು ಮುಸ್ಲಿಂ ಅಲ್ಪಸಂಖ್ಯಾಕರ ಭವಿಷ್ಯದ ಬಗ್ಗೆ ಪ್ರಶ್ನಿಸಲಾಗಿದೆ. ಈ ವೇಳೆ ಉತ್ತರಿಸಿದ ಅವರು, ದೇಶದಲ್ಲಿ ಸೂಕ್ಷ್ಮ ಅಲ್ಪಸಂಖ್ಯಾಕ ವರ್ಗವೆಂದು ಗುರುತಿಸಲಾಗಿರುವ ಪಾರ್ಸಿಗಳ ಆರ್ಥಿಕ ಯಶಸ್ಸಿನ ಉದಾಹರಣೆ ನೀಡಿದರು.
ಅಲ್ಲದೇ, ಯಾವುದೇ ಧಾರ್ಮಿಕ ಅಲ್ಪಸಂಖ್ಯಾಕರಿಗೂ ಇಲ್ಲಿನ ಸಮಾಜ ತಾರತಮ್ಯ ತೋರುತ್ತಿಲ್ಲ. ಮುಸ್ಲಿಮರು ಬೇರೆ ರಾಷ್ಟ್ರಗಳಿಗಿಂತಲೂ ಹೆಚ್ಚಿನ ಸುರಕ್ಷಿತ ಸ್ವರ್ಗವನ್ನು ಭಾರತದಲ್ಲಿ ಕಂಡುಕೊಂಡಿದ್ದಾರೆ. ಸಂತೋಷವಾಗಿ, ಸಮೃದ್ಧವಾಗಿ ಜೀವಿಸುತ್ತಿದ್ದಾರೆ ಎಂದು 'ಪ್ರಧಾನಿ ಪ್ರತಿಪಾದಿಸಿದ್ದಾರೆ.