-->
ಮಂಗಳೂರು: ಮನೆಯಿಂದ ಹೊರಬಂದರೆ ಕೋತಿ ಕಚ್ಚುತ್ತೆ - ನೆಲ್ಲಿಜೋರ ನಿವಾಸಿಗಳ ನಿದ್ದೆಗೆಡಿಸಿದ ವಾನರ

ಮಂಗಳೂರು: ಮನೆಯಿಂದ ಹೊರಬಂದರೆ ಕೋತಿ ಕಚ್ಚುತ್ತೆ - ನೆಲ್ಲಿಜೋರ ನಿವಾಸಿಗಳ ನಿದ್ದೆಗೆಡಿಸಿದ ವಾನರ


ಮಂಗಳೂರು: ನಗರದ ಹೊರವಲಯದ ಕುಪ್ಪೆಪದವು ನೆಲ್ಲಿಜೋರ ಎಂಬಲ್ಲಿನ ನಿವಾಸಿಗಳಿಗೆ ಕೋತಿಕಾಟದಿಂದ ಬೇಸತ್ತಿದ್ದಾರೆ. ಮನೆಯಿಂದ ಹೊರ ಬಂದರೆ ಸಾಕು ಕೋತಿಯೊಂದು ಎಗರಿ ಕಚ್ಚುತ್ತದೆ. ಕಾದು ಕುಳಿತು ಅಟ್ಯಾಕ್ ಮಾಡುತ್ತದೆ ಈ ಒಂಟಿ ವಾನರ. ಕಚ್ಚಿ ಗಾಯಗೊಳಿಸಿ ಇಲ್ಲದ ಅವಾಂತರ ಸೃಷ್ಟಿಸುತ್ತಿದೆ.  

ಯಾರೋ ಕುಪ್ಪೆಪದವು - ಎಡಪದವು ಮಧ್ಯಭಾಗದ ನೆಲ್ಲಿಜೋರ ಪ್ರದೇಶಕ್ಕೆ ಈ ಮಂಗನನ್ನು ತಂದು ಬಿಟ್ಟಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದಕ್ಕೆ ಬಾಲವೂ ಇಲ್ಲ. ಈ ಮಂಗನನ್ನು ಬಿಟ್ಟು ಇಲ್ಲಿ ಬೇರೆ ಮಂಗಗಳೇ ಈ ಪ್ರದೇಶದಲ್ಲಿಲ್ಲ. ಈ ಕೋತಿರಾಯನ ಕಪಿಚೇಷ್ಟೆಯಿಂದ ಜನತೆ ಮನೆಯಿಂದ ಹೊರಗೆ ಬರಲು ಆತಂಕಪಡುವ ಸ್ಥಿತಿ ಉಂಟಾಗಿದೆ‌. ಸೀಯಾಳ, ಅಡಿಕೆಗಳನ್ನು ತಿಂದು ಹಾಳುಗೆಡವುದಿಲ್ಲ. ಆದರೆ ಮನುಷ್ಯರ ತಲೆ ಕಂಡ್ರೆ ಸಾಕು ಅವರ ಮೇಲೆ ದಾಳಿ ನಡೆಸುತ್ತದೆ. ಕಾದು ಕುಳಿತು ದಾಳಿ ಮಾಡುತ್ತದೆ ಈ ಮಂಗ. ಈ ವಾನರ ಮನುಷ್ಯ ದ್ವೇಷದಿಂದ ಇಲ್ಲಿನ ಜನತೆ ಕಂಗೆಟ್ಟಿದ್ದಾರೆ.

ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗೆ ದೂರನ್ನಿತ್ತಿದ್ದರು. ಅವರು ಈ ಮಂಗನ ಸೆರೆಹಿಡಿಯಲು ಗೂಡನ್ನು ಇಟ್ಟಿದ್ದರು. ಆದರೂ ಇಲ್ಲಿನ ಸಮಸ್ಯೆ ಬಗೆಹರಿದೇ ಇಲ್ಲ. ಏಕೆಂದರೆ ಈ ಚಾಲಾಕಿ ಕೋತಿ ಗೂಡಿನ ಹತ್ತಿರ ಬಂದರೂ ಅದರೊಳಗೆ ಸೆರೆ ಸಿಕ್ಕದೆ ತಪ್ಪಿಸುತ್ತಿದೆ. ಇದೀಗ ಈ ಕೋತಿ ದಾಳಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರ ಕೈಗೆ 22 ಸ್ಟಿಚ್ಜ್ ಹಾಕಲಾಗಿದೆ. ಇನ್ನೂ ಅನೇಕರಿಗೆ ಇದೇ ರೀತಿ ದಾಳಿ ಮಾಡಿದೆ ಈ ಮಂಗ. ಆದರೆ ಈ ಕೋತಿಕಾಟದಿಂದ ಮುಕ್ತರಾಗುವ ಬಗೆ ಮಾತ್ರ ಇನ್ನೂ ಊರವರಿಗೆ ಸಿಕ್ಕಿಲ್ಲ.

Ads on article

Advertise in articles 1

advertising articles 2

Advertise under the article