-->
ಪ್ರೇಯಸಿಯನ್ನು ಹತ್ಯೆಗೈದು ಫೋಟೋ ಸ್ಟೇಟಸ್ ಹಾಕಿ ವಿಕೃತಿ ಮೆರೆದ ಪಾಪಿ ಪ್ರಿಯಕರ

ಪ್ರೇಯಸಿಯನ್ನು ಹತ್ಯೆಗೈದು ಫೋಟೋ ಸ್ಟೇಟಸ್ ಹಾಕಿ ವಿಕೃತಿ ಮೆರೆದ ಪಾಪಿ ಪ್ರಿಯಕರ


ಚೆನ್ನೈ: ಪ್ರಿಯಕರನೇ ತನ್ನ ಪ್ರೇಯಸಿಯನ್ನು ಹತ್ಯೆಗೈದು ಮೃತದೇಹದ ಪೋಟೋವನ್ನು ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿ ವಿಕೃತಿ ಮೆರೆದಿರುವ ಘಟನೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದಿದೆ. ಇದೀಗ ಪ್ರಿಯಕರ ಪೊಲೀಸ್ ಅತಿಥಿಯಾಗಿದ್ದಾನೆ.

ಫೌಝಿಯಾ (20) ಮೃತಪಟ್ಟ ದುರ್ದೈವಿ. ಪ್ರಿಯಕರ ಆಶಿಕ್​ (20)ನನ್ನು ಬಂಧಿತ ಆರೋಪಿ. ಇವರಿಬ್ಬರೂ ಕೇರಳದ ಕೊಲ್ಲಂ ಮೂಲದವರು ಎಂದು ತಿಳಿದು ಬಂದಿದೆ.


ಆರೋಪಿ ಆಶಿಕ್​ ಹಾಗೂ ಫೌಝಿಯಾ ಪರಸ್ಪರ ಪ್ರೀತಿಸುತ್ತಿದ್ದರು‌. ಮೃತಪಟ್ಟ ಫೌಝಿಯಾ ಚೆನ್ನೈನಲ್ಲಿ ನರ್ಸಿಂಗ್​ ವ್ಯಾಸಂಗ ಮಾಡುತ್ತಿದ್ದಳು. ಇತ್ತೀಚಿಗೆ ಆಶಿಕ್​ ಬೇರೊಬ್ಬ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದ. ಈ ವಿಚಾರವಾಗಿ ಪ್ರೇಮಿಗಳ ನಡುವೆ ಗಲಾಟೆಯಾಗಿತ್ತು. ಆದ್ದರಿಂದ ಈ ಬಗ್ಗೆ ಮಾತನಾಡಲು ಶುಕ್ರವಾರ ಕ್ರೋಮ್​ಪೇಟ್​ ಪೊಲೀಸ್​ ಠಾಣೆ ವ್ಯಾಪ್ತಿಯ ಲಾಡ್ಜ್​ ಒಂದರಲ್ಲಿ ರೂಂ ಒಂದನ್ನು ಬಾಡಿಗೆಗೆ ಪಡೆದಿದ್ದರು.

ಕೊಠಡಿ ಪ್ರವೇಶಿಸಿದ ಬಳಿಕ ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ. ಸಿಟ್ಟಿಗೆದ್ದ ಆರೋಪಿ ಆಶಿಕ್​ ಆಕೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಬಳಿಕ ತಾನು ಧರಿಸಿದ್ದ ಟಿ-ಶರ್ಟ್​ನಿಂದ ಆಕೆಯ ಕುತ್ತಿಗೆಗೆ ಸುತ್ತಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಫೌಝಿಯಾ ಮೃತದೇಹದ ಫೋಟೋವನ್ನು ವಾಟ್ಸ್​ಆ್ಯಪ್​ ಸ್ಟೇಟಸ್ ಹಾಕಿ ಹೋಟೆಲ್​ನಿಂದ ಪರಾರಿಯಾಗಿದ್ದಾನೆ. ಸ್ಟೇಟಸ್​ ನೋಡಿದ ಫೌಝಿಯಾ ಸ್ನೇಹಿತರು ತಕ್ಷಣ ಪೊಲೀಸರಿಗೆ ಈ ವಿಚಾರ ತಿಳಿಸಿದ್ದಾರೆ. ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.



Ads on article

Advertise in articles 1

advertising articles 2

Advertise under the article