ಆಸ್ತಿ ವರ್ಗಾವಣೆ ಮಾಡಲು ನಿರಾಕರಿಸಿದ ತಾಯಿಯ ಶಿರವನ್ನೇ ಛೇದಿಸಿ ಕೊಲೆಗೈದ ಪಾಪಿ ಪುತ್ರ
Monday, December 11, 2023
ಸೀತಾಪುರ: ಜಮೀನನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಲು ನಿರಾಕರಿಸಿದ್ದರಿಂದ ತಾಯಿಯ ಶಿರವನ್ನೇ ಪುತ್ರನೊಬ್ಬ ಛೇದಿಸಿದ ಆತಂಕಕಾದಿ ಘಟನೆಯೊಂದು ಉತ್ತರ ಪ್ರದೇಶದ ತಾಲಗಾಂವ ಪೋಲಿಸ್ ಠಾಣಾ ವ್ಯಾಪ್ತಿಯ ಮೇಜಪುರ ಗ್ರಾಮದಲ್ಲಿ ನಡೆದಿದೆ.
ಮದ್ಯವ್ಯಸನಿ ದಿನೇಶ ಪಾಸಿ (35) ಕೃಷಿ ಬೇಡ್ ನಿಂದ ತನ್ನ ತಾಯಿ ಕಮಲಾ ದೇವಿ (65)ಯ ಶಿರವನ್ನೇ ಛೇದಿಸಿ ಕೊಲೆ ಮಾಡಿದ್ದಾನೆ. ರುಂಡವಿಲ್ಲದ ಮೃತದೇಹ ಮನೆಯ ಹೊರಗಡೆ ಪತ್ತೆಯಾಗಿದೆ. ಪರಾರಿಯಾಗಿರುವ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.