ಮಂಗಳೂರು: ಪಾಂಡೇಶ್ವರ ಅಗ್ನಿಶಾಮಕ ದಳದ ಕಂಪೌಂಡ್ ನೊಳಗೆ ಮುಳ್ಳುಹಂದಿ ಪ್ರತ್ಯಕ್ಷ - ಸಿಬ್ಬಂದಿಯಿಂದ ರಕ್ಷಣೆ
Friday, December 29, 2023
ಮಂಗಳೂರು: ನಗರದ ಪಾಂಡೇಶ್ವರ ಅಗ್ನಿಶಾಮಕ ದಳದ ಕಂಪೌಂಡ್ ನೊಳಗೆ ಶುಕ್ರವಾರ ಬೆಳ್ಳಂಬೆಳಗ್ಗೆ ಮುಳ್ಳುಹಂದಿಯೊಂದು ಪ್ರತ್ಯಕ್ಷವಾಗಿದ್ದು, ಅದನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.
ಶುಕ್ರವಾರ ಬೆಳಗ್ಗೆ 8.30ರ ವೇಳೆಗೆ ಈ ಮುಳ್ಳುಹಂದಿ ಪಾಂಡೇಶ್ವರ ಅಗ್ನಿಶಾಮಕ ದಳದ ಕಂಪೌಂಡ್ ನೊಳಗೆ ನೋಡಲು ಸಿಕ್ಕಿದೆ. ಅದನ್ನು ಗಮನಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೃಷ್ಣ ಹಂಡಾರವರು ಶ್ವಾನ ರಕ್ಷಣೆ ಮಾಡುವ ಬಲೆಯ ಮೂಲಕ ಹಿಡಿದಿದ್ದಾರೆ. ಬಳಿಕ ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.