-->
ಬಂಟ್ವಾಳ: ವಿವಾಹವಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ ಪತಿಯ ಸ್ನೇಹಿತನಿಂದ ಹಲ್ಲೆ ಕೊಲೆ ಬೆದರಿಕೆ

ಬಂಟ್ವಾಳ: ವಿವಾಹವಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ ಪತಿಯ ಸ್ನೇಹಿತನಿಂದ ಹಲ್ಲೆ ಕೊಲೆ ಬೆದರಿಕೆ



ಬಂಟ್ವಾಳ: ಮೂರು ಮಕ್ಕಳ ತಾಯಿಯನ್ನು ಪತಿಯ ಸ್ನೇಹಿತನೇ ವಿವಾಹವಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಬಳಿಕ ಹಲ್ಲೆಗೈದು ಕೊಲೆಮಾಡುವ ಬೆದರಿಕೆ ಹಾಕಿರುವ ಆರೋಪದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಲೊರೆಟ್ರೊ ಪದವು ನಿವಾಸಿಯ ಪತ್ನಿಯಾಗಿದ್ದ ಸಂತ್ರಸ್ತೆ ಇದೀಗ ತಾನ ಪತಿಯ ಸ್ನೇಹಿತನಿಂದಲೇ ತಾನು ಮೋಸ ಹೋಗಿರುವುದಾಗಿ ಪೊಲೀಸ್‌ ದೂರು ನೀಡಿದ್ದಾಳೆ. ನರಿಕೊಂಬು ನಿವಾಸಿ ತಸ್ಲಿಂ ಆರೀಫ್‌ ಆರೋಪಿತನಾಗಿದ್ದಾನೆ. ಈತ ನಿರಂತರ ಅತ್ಯಾಚಾರ ಎಸಗಿ, ಮದುವೆಯಾಗುವುದಾಗಿ ನಂಬಿಸಿದ್ದಾನೆ. ಪತಿಯನ್ನು ತೊರೆದು ಆತನೊಂದಿಗೇ ನೆಲೆಸಿದ ಬಳಿಕ ಹಲ್ಲೆಗೈದು ಹತ್ಯೆ ಬೆದರಿಕೆ ಹಾಕಿದ್ದಾನೆಂದು ದೂರು ದಾಖಲಾಗಿದೆ.

ತಸ್ಲಿಂ ಆರೀಫ್, ಸಂತ್ರಸ್ತ ಮಹಿಳೆಯ ಪತಿಯ ಸ್ನೇಹಿತ. ಆದ್ದರಿಂದ ಯಾವಾಗಲೂ ಪತಿಯೊಂದಿಗೆ ಮನೆಗೆ ಬರುತ್ತಿದ್ದ. ಈ ವೇಳೆ ಸಂತ್ರಸ್ತೆ ಹಾಗೂ ತಸ್ಲಿಂಗೆ ಸಲುಗೆ ಉಂಟಾಗಿದೆ. ಬಳಿಕ ಮೊಬೈಲ್ ನಲ್ಲಿ ಚ್ಯಾಟಿಂಗ್, ಅಕೆಯ ಪತಿ ಕೆಲಸಕ್ಕೆ ಹೋದ ಸಂದರ್ಭ ಮನೆಗೆ ಬರುವುದು ಎಲ್ಲಾ ಮಾಡುತ್ತಿದ್ದ. ಈ ಸಲುಗೆ ದೈಹಿಕ ಸಂಪರ್ಕ ಬೆಳೆಸುವಲ್ಲಿವರೆಗೆ ಬಂದಿದೆ. ಆಗ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದ. ಹೀಗೆ ಇಬ್ಬರ ನಡುವೆ ನಿರಂತರ ದೈಹಿಕ ಸಂಪರ್ಕ ಬೆಳೆದಿದೆ. ಅಕ್ರಮ ಸಂಬಂಧ ಪತಿಗೆ ತಿಳಿದು ಆತ ಪತ್ನಿಯಿಂದ ದೂರವಾಗಿದ್ದಾನೆ.

ಬಳಿಕ ಆರೋಪಿಯೊಂದಿಗೆ ಸಂತ್ರಸ್ತೆ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಮೂರು ತಿಂಗಳಿನಿಂದ ಮಹಿಳೆಯನ್ನು ಪಾಣೆಮಂಗಳೂರು ಗ್ರಾಮದ ಜೈನರ ಪೇಟೆಯಲ್ಲಿ ಬಾಡಿಗೆ ಮನೆ ಮಾಡಿ ಕೂರಿಸಿದ್ದ. ಇದೀಗ ಆರೋಪಿ ತಸ್ಲಿಂ ಕುಲ್ಲಕ ಕಾರಣಕ್ಕೆ ಸಂತ್ರಸ್ತೆಯ ಮುಖಕ್ಕೆ ಬಾಯಿಗೆ ಕೈಯಿಂದ ಹೊಡೆದು ಸೊಂಟಕ್ಕೆ ಒದ್ದಿರುವುದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಮತ್ತು ಮಕ್ಕಳನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article