ಬೆಳ್ತಂಗಡಿ: ಕಾಳಿಂಗನ ಬಾಯಿಗೆ ಸಿಕ್ಕಿದ ಭಾರೀ ಗಾತ್ರದ ಹೆಬ್ಬಾವಿನ ರಕ್ಷಣೆ
Wednesday, December 13, 2023
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದಲ್ಲಿ ಭಾರೀ ಗಾತ್ರದ ಹೆಬ್ಬಾವವೊಂದನ್ನು ಕಾಳಿಂಗ ಸರ್ಪವೊಂದು ಬೇಟೆಯಾಡಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಸ್ನೇಕ್ ಅಶೋಕ್ ಎರಡೂ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಕಲ್ಲಾಜೆ ಪ್ರಾಥಮಿಕ ಶಾಲೆಯ ಬಳಿಯ ನಿವಾಸಿ ಕೆ.ಬಾಲಕೃಷ್ಣ ಗೌಡ ಎಂಬವರ ಮನೆಯ ಅಂಗಳದಲ್ಲಿ ಹೆಬ್ಬಾವನ್ನು ಕಾಳಿಂಗ ಸರ್ಪ ಬೇಟೆಯಾಡುತ್ತಿತ್ತು. ತಕ್ಷಣ ಮನೆಯವರು ಸ್ನೇಕ್ ಅಶೋಕ್ ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸ್ನೆಕ್ ಅಶೋಕ್ ಅವರು ಕಾಳಿಂಗ ಸರ್ಪದ ಹಿಡಿತದಲ್ಲಿದ್ದ ಹೆಬ್ಬಾವನ್ನು ರಕ್ಷಿಸಿದ್ದಾರೆ. 8 ಅಡಿ ಉದ್ದದ ಹೆಬ್ಬಾವನ್ನು ಸುಮಾರು 16 ಅಡಿ ಉದ್ದದ ಕಾಳಿಂಗ ಸರ್ಪ ಬೇಟೆಯಾಡಿತ್ತು. ಆದರೆ ಹೆಬ್ಬಾವಿಗೆ ಸಣ್ಣಪುಟ್ಟ ಗಾಯದ ಹೊರತು ಬೇರೇನೂ ಆಗಿರಲಿಲ್ಲ. ಆ ಬಳಿಕ ಕಾಳಿಂಗ ಸರ್ಪ ಮತ್ತು ಹೆಬ್ಬಾವನ್ನು ಸುರಕ್ಷಿತವಾಗಿ ಸ್ನೇಕ್ ಅಶೋಕ್ ಲಾಯಿಲ ಅವರು ಕಾಡಿಗೆ ಬಿಟ್ಟಿದ್ದಾರೆ.