ಪುತ್ತೂರು: ಯುವವಿಜ್ಞಾನಿ ನೇಣಿಗೆ ಶರಣು
Friday, December 15, 2023
ಪುತ್ತೂರು: ಯುವವಿಜ್ಞಾನಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿ ಗುರುವಾರ ನಡೆದಿದೆ.
ಕಲ್ಲರ್ಪೆ ನಿವಾಸಿ ಭರತ್ (24) ಮೃತಪಟ್ಟ ಯುವಕ.
ಭರತ್ ಅವರು ಹೈದರಾಬಾದ್ ಡಿಆರ್ ಡಿಒ ಎಂಬ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಭರತ್ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಒಂದು ವಾರದ ಹಿಂದೆಯಷ್ಟೇ ಊರಿಗೆ ಆಗಮಿಸಿದ್ದರು. ಅವರು ಸಂಸ್ಥೆಗೆ ರಾಜಿನಾಮೆ ನೀಡಿದ್ದರೂ ಅದು ಸ್ವೀಕರಿಸರಲಿಲ್ಲ ಎನ್ನಲಾಗಿದೆ.
ಬುಧವಾರ ರಾತ್ರಿ ಡಿಆರ್ ಡಿಒ ಕಚೇರಿಯಿಂದ ಕರೆ ಬಂದಿದೆ ಎಂದು ಕುಟುಂಬಸ್ಥರಿಗೆ ಭರತ್ ತಿಳಿಸಿದ್ದರು. ಆ ಬಳಿಕ ಮಲಗಿದ್ದ ಭರತ್ ತಡರಾತ್ರಿ ಈ ಕೃತ್ಯ ಎಸಗಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.