ಚಹಾ ಮಾಡಲು ತಡ ಮಾಡಿದ್ದಕ್ಕೆ ಪತ್ನಿಯ ತಲೆಯನ್ನೇ ಕತ್ತರಿಸಿದ ಕೀಚಕ!
Thursday, December 21, 2023
ಲಕ್ಷ್ಮೀ: ಮುಂಜಾನೆ ಚಹಾ ತಡವಾಗಿ ನೀಡಿದಳೆಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯ ತಲೆಯನ್ನೇ ಕತ್ತರಿಸಿ ಹಾಕಿರುವ ಭೀಕರ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ.
ಭೋಜಪುರಿ ಗ್ರಾಮದ ನಿವಾಸಿಗಳಾದ ಧರ್ಮವೀರ್ (52) ಹಾಗೂ ಅವರ ಪತ್ನಿ ಸುಂದರಿ (50) ನಡುವೆ ಚಹಾ ತಡವಾಗಿ ಸಿದ್ಧಪಡಿಸಿದ ವಿಚಾರ ಸಂಬಂಧ ವಾಗ್ವಾದ ನಡೆದಿದೆ.
ಈ ವೇಳೆ ತೀವ್ರ ಕುಪಿತಗೊಂಡ ಧರ್ಮವೀರ್ ಸುಂದರಿಯ ತಲೆಯನ್ನೇ ಕತ್ತಿಯಿಂದ ಕತ್ತರಿಸಿ ಹಾಕಿದ್ದಾನೆ. ಆಕೆಯ ಕಿರುಚಾಟ ಕೇಳಿ ಗ್ರಾಮಸ್ಥರು ಧಾವಿಸುವ "ವೇಳೆಗಾಗಲೇ ಸುಂದರಿ ಮೃತಪಟ್ಟಿದ್ದು, ತತ್ ಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.