ಮಂಗಳೂರಿಗೆ ಕೊನೆಗೂ ಬಂತು ಮೊದಲ ವಂದೇ ಭಾರತ್- ಮಂಗಳೂರು ಮಡಗಾಂವ್ ನಡುವೆ ಪ್ರಾಯೋಗಿಕ ಓಡಾಟ
ಮಂಗಳೂರು: ಮಂಗಳೂರಿನಲ್ಲಿ ವಂದೇ ಭಾರತ್ ರೈಲು ಮೊದಲ ಬಾರಿಗೆ ಓಡಾಟ ನಡೆಸಲು ಸಜ್ಜಾಗಿದೆ. ಮಂಗಳೂರು ಮತ್ತು ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಓಡಾಟಕ್ಕೆ ದಕ್ಷಿಣ ರೈಲ್ವೆ ಸಜ್ಜಾಗಿದ್ದು, ಇಂದು ಬೆಳಿಗ್ಗೆ ಪ್ರಾಯೋಗಿಕ ಓಡಾಟ ನಡೆಯಿತು.
ಇಂದು ಬೆಳಿಗ್ಗೆ 8.30 ಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಈ ಪ್ರಾಯೋಗಿಕ ರೈಲು ಪ್ರಯಾಣ ಆರಂಭಿಸಿದ್ದು ಮಧ್ಯಾಹ್ನ 1.45 ಕ್ಕೆ ಮಡಗಾಂವ್ ತಲುಪಲಿದೆ. ಪ್ರಾಯೋಗಿಕ ಓಡಾಟದ ಸಂದರ್ಭದಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ , ಶಾಸಕ ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು.
ಮಂಗಳೂರು ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರು ಸೆಂಟ್ರಲ್, ಉಡುಪಿ, ಕಾರವಾರ, ಮಡಗಾಂವ್ ನಲ್ಲಿ ನಿಲುಗಡೆಯಾಗಲಿದೆ. ಮಂಗಳೂರು ಮಡಗಾಂವ್ ರೈಲು ಮಂಗಳೂರು ಸೆಂಟ್ರಲ್ ನಿಂದ ಬೆಳಿಗ್ಗೆ 8.30 ಕ್ಕೆ ಹೊರಟು , ಮಧ್ಯಾಹ್ನ 1.05 ಕ್ಕೆ ಮಡಗಾಂವ್ ತಲುಪಲಿದೆ. ಉಡುಪಿ ಮತ್ತು ಕಾರವಾರದಲ್ಲಿ ನಿಲುಗಡೆ ಇರಲಿದೆ. ಸಂಜೆ 6.10 ಕ್ಕೆ ಮಡಗಾಂವ್ ನಿಂದ ಹೊರಟು ರಾತ್ರಿ 10.45 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.