Whatsapp ನಂಬಿ ಮಕ್ಕಳ ಶವವನ್ನು ಉಪ್ಪಿನಲ್ಲಿ ಹೂತಿಟ್ಟರು
ವಾಟ್ಸಪ್ ನಲ್ಲಿ ವೈರಲ್ ಆಗಿದ್ದ ವಿಡಿಯೊ ನಂಬಿ, ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದ ಇಬ್ಬರು ಮಕ್ಕಳ ಶವಗಳನ್ನು. ಪೋಷಕರು ಉಪ್ಪಿನ ಗುಡ್ಡೆಯಲ್ಲಿ ಹೂತಿಟ್ಟು ಬದುಕಿಸಲು ಯತ್ನಿಸಿದ ನಡೆಸಿದ ವಿಚಿತ್ರ ಘಟನೆ ಹಾವೇರಿಯ ಘಾಳಪುಜಿ ಗ್ರಾಮದಲ್ಲಿ ನಡೆದಿದೆ.
ಅಯ್ಯನಕೆರೆಯಲ್ಲಿ ಭಾನುವಾರ ಈಜಲು ಹೋಗಿದ್ದ ನಾಗರಾಜ ಲಂಕೇರ(11) ಮತ್ತು ಹೇಮಂತ ಹರಿಜನ(12) ಎಂಬ ಇಬ್ಬರು ಬಾಲಕರು ಮುಳುಗಿ ಸಾವನ್ನಪ್ಪಿದ್ದರು.
ನೀರಲ್ಲಿ ಮುಳುಗಿ ಸತ್ತವರನ್ನು ಉಪ್ಪಿನಲ್ಲಿ ಮುಚ್ಚಿಟ್ಟರೆ ಬದುಕುತ್ತಾರೆ ಎಂಬ ವಿಡಿಯೊ ಕೆಲ ದಿನಗಳ ಹಿಂದೆ ವಾಟ್ಸಪ್ ನಲ್ಲಿ ವೈರಲ್ ಆಗಿತ್ತು. ಇದನ್ನು ನಂಬಿದ ಪೋಷಕರು ಮಕ್ಕಳ ಮೃತದೇಹಗಳನ್ನು ಕೆರೆಯಿಂದ ಹೊರ ತೆಗೆದು ಕ್ವಿಂಟಾಲ್ ಗಟ್ಟಲೇ ಉಪ್ಪಿನ ರಾಶಿಯಲ್ಲಿ ಸತತ 6 ತಾಸು ಇಟ್ಟು ಬದುಕಿಸಲು ಪ್ರಯತ್ನಿಸಿದ್ದಾರೆ.
'ಒಂದು ಸಲ ಹೋದ ಪ್ರಾಣ ವಾಪಸ್ ಬರುವುದಿಲ್ಲ. ಈ ರೀತಿಯ ಪ್ರಯತ್ನದಿಂದ ಮಕ್ಕಳು ಬದುಕುವುದಿಲ್ಲ,'' ಎಂದು ಕಾಗಿನೆಲೆ ಪೊಲೀಸರು ಪೋಷಕರ ಮನವೊಲಿಸಿದ ನಂತರ ಮರಣೋತ್ತರ ಪರೀಕ್ಷೆಗೆ ಮೃತದೇಹಗಳನ್ನು ಕಳಿಸಲಾಗಿದೆ. ಹೆತ್ತವರ ಈ ಪ್ರಯತ್ನ ಸಹ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.