-->
"ಯುವನಿಧಿ" ಯೋಜನೆಗೆ ನೋಂದಾಯಿಸಿಲ್ಲವೇ..? ಹಾಗಿದ್ದರೆ ಇಲ್ಲಿದೆ ಮಾಹಿತಿ

"ಯುವನಿಧಿ" ಯೋಜನೆಗೆ ನೋಂದಾಯಿಸಿಲ್ಲವೇ..? ಹಾಗಿದ್ದರೆ ಇಲ್ಲಿದೆ ಮಾಹಿತಿ

"ಯುವನಿಧಿ" ಯೋಜನೆಗೆ ನೋಂದಾಯಿಸಿಲ್ಲವೇ..? ಹಾಗಿದ್ದರೆ ಇಲ್ಲಿದೆ ಮಾಹಿತಿ





ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯನ್ನು ಜಾರಿಗೆ ತರಲು ಸಿದ್ಧತೆ ನಡೆದಿದೆ. ನಿರುದ್ಯೋಗಿ ಯುವಕ-ಯುವತಿಯವರಿಗೆ ತಿಂಗಳಿಗೆ ರೂ. 3000/- ಮಾಸಾಶನ ಮತ್ತು ಡಿಪ್ಲೊಮಾ ಪದವಿ ಹೊಂದಿದ ನಿರುದ್ಯೋಗಿಗಳಿಗೆ ರೂ. 1500/- ನೀಡುವ ಯೋಜನೆ ಇದಾಗಿದೆ.


ಸರ್ಕಾರದ ಐದನೇ ಗ್ಯಾರಂಟಿ ಯೋಜನೆ ಇದಾಗಿದ್ದ, ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಹ ಫಲಾನುಭವಿಗಳು ಈ ಯೋಜನೆಗೆ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ.


ಡಿಸೆಂಬರ್ 26ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. 2024ರ ಜನವರಿಯಿಂದ ಅರ್ಹ ಫಲಾನುಭವಿಗಳ ಖಾತೆಗೆ ನೇರ ಹಣ ಜಮೆ ಆಗಲಿದೆ.


2022-23ರ ಸಾಲಿಗೆ ಪದವಿ ಪಡೆದು ಆರು ತಿಂಗಳು ಪೂರೈಸಿದವರು ಮತ್ತು ಉನ್ನತ ಶಿಕ್ಷಣ ಅಥವಾ ಯಾವುದೇ ಉದ್ಯೋಗಕ್ಕೆ ಸೇರದೇ ಇರುವವರು ಈ ಯೋಜನೆಗೆ ಅರ್ಹರಾಗಿರುತ್ತಾರೆ.


ಉದ್ಯೋಗ ಸಿಗುವವರೆಗೆ ಅಥವಾ ಎರಡು ವರ್ಷ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಈ ಮಾಸಾಶನ ನಿರುದ್ಯೋಗಿ ಯುವಕ-ಯುವತಿಯರಿಗೆ ದೊರೆಯಲಿದೆ.




Ads on article

Advertise in articles 1

advertising articles 2

Advertise under the article