1 ಕೋಟಿ ರೂ ಸಂಬಳದ ಉದ್ಯೋಗ ಪಡೆದ 85 ವಿದ್ಯಾರ್ಥಿಗಳು!
ಮುಂಬೈ: ಭಾರತೀಯ ತಾಂತ್ರಿಕ ಸಂಸ್ಥೆ ಬಾಂಬೆ (ಐಐಟಿ ಬಾಂಬೆ)ಯ 85 ವಿದ್ಯಾರ್ಥಿಗಳು ವಾರ್ಷಿಕ 1 ಕೋಟಿ ರೂ ವೇತನದ ಉದ್ಯೋಗವನ್ನು ಪಡೆದಿದ್ದಾರೆ.
2023-2024ರ ಪ್ಲೇಸ್ಮೆಂಟ್ ಸೀಸನ್ನಲ್ಲಿ ಮೊದಲ ಹಂತದಲ್ಲಿ 388 ಭಾರತೀಯ ಮತ್ತು ಅಂತರಾಷ್ಟ್ರೀಯ ಕಂಪನಿಗಳು ಮತ್ತು ಸಂಘಟನೆಗಳು ವಿಶ್ವದೆಲ್ಲಡೆ ಹಲವು ವಲಯದಲ್ಲಿ ಉದ್ಯೋಗದ ಅವಕಾಶವನ್ನು ನೀಡಿದೆ. ಇದರಲ್ಲಿ ಅನೇಕ ಕಂಪನಿಗಳು ಪೂರ್ವ ನೇಮಕಾತಿ ಅವಕಾಶ (ಪ್ರಿ ಪ್ಲೆಸ್ಮೆಂಟ್ ಆಫರ್- ಪಿಪಿಒ) ನೀಡಿದೆ.
ನೇಮಕಾತಿ ಸಂಸ್ಥೆಗಳು ವಿದ್ಯಾರ್ಥಿಗಳೊಂದಿಗೆ ನೇರವಾಗಿ ಮತ್ತು VIRTUAL ಆಗಿ ಸಂದರ್ಶನವನ್ನು ನಡೆಸಿದೆ.
ಡಿಸೆಂಬರ್ 20, 2023ರವರೆಗೆ 1,888 ವಿದ್ಯಾರ್ಥಿಗಳು 1,340 ಕೆಲಸದ ಆಫರ್ ಪಡೆದಿದ್ದು, ಇದರಲ್ಲಿ ಏಳು ಪಿಎಸ್ಯು ಮತ್ತು 297 ಪಿಪಿಒ, ಇಂಟರ್ನ್ಶಿಪ್ ಮೂಲಕ 258 ಹುದ್ದೆಗಳನ್ನು ಸ್ವೀಕರಿಸಲಾಗಿದೆ. ಐಐಟಿ-ಬಿಯು ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ವಿದ್ಯಾರ್ಥಿಗಳ ಅಡ್ಡದಾರಿಯನ್ನು ಕಡಿಮೆ ಮಾಡಲು ಕಂಪನಿಗಳ ಸ್ಲಾಟ್ ಅನ್ನು ಖಚಿತಪಡಿಸಿದೆ ಎಂದರು.
ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ( ಸರಾಸರಿ ವಾರ್ಷಿಕ ವೇತನ 21.88) ಅತಿ ಹೆಚ್ಚು ಅವಕಾಶ ಬಂದಿದೆ. ಮಾಹಿತಿ ತಂತ್ರಜ್ಞಾನ/ ಸಾಫ್ಟ್ವೇರ್ನಲ್ಲಿ (ಸರಾಸರಿ ವಾರ್ಷಿಕ ವೇತನ 26.35 ಲಕ್ಷ), ಬ್ಯಾಂಕಿಂಗ್/ ಫಿನ್ಟೆಕ್ನಲ್ಲಿ (ವಾರ್ಷಿಕ 32.38 ಲಕ್ಷ ವೇತನ), ಮ್ಯಾನೇಜ್ಮೆಂಟ್ ಕನ್ಸಲಟೆನ್ಸಿಯಲ್ಲಿ ಸರಾಸರಿ ವಾರ್ಷಿಕ ವೇತನ 18.64 ಲಕ್ಷ ರೂ, ಟಾಡಾ ಸೈನ್ಸ್ ಮತ್ತು ಅನಾಲಿಟಿಕ್ಸ್, ರಿಸರ್ಚ್ ಅಂಡ್ ಡೆವಲಪ್ಮೆಂಟ್ನಲ್ಲಿ ಸರಾಸರಿ ವಾರ್ಷಿಕ ವೇತನ 36.94 ರೂ ಮತ್ತು ಡಿಸೈನ್ ಸೇರಿದಂತೆ ಇತರೆ ಸರಾಸರಿ ವೇತನವೂ 24.2 ಲಕ್ಷ ವಾರ್ಷಿಕದ ವೇತನ ಲಭಿಸಿದೆ.
ಈ ನೇಮಕಾತಿಯಲ್ಲಿ 63 ವಿದ್ಯಾರ್ಥಿಗಳು ಜಪಾನ್, ತೈವಾನ್, ದಕ್ಷಿಣ ಕೊರಿಯಾ, ನೆದರ್ಲ್ಯಾಂಡ್, ಸಿಂಗಾಪೂರ್ ಮತ್ತು ಹಾಂಗ್ಕಾಂಗ್ನಂತಹ ಅಂತಾರಾಷ್ಟ್ರೀಯ ದೇಶಗಳಲ್ಲಿ ಉದ್ಯೋಗವನ್ನು ಪಡೆದಿದ್ದಾರೆ.
ಸಂಸ್ಥೆಗೆ ಆಗಮಿಸಿದ ಟಾಪ್ ನೇಮಕಾತಿ ಸಂಸ್ಥೆಗಳು ಹೀಗಿವೆ. ಅಕ್ಸೆಂಚರ್, ಏರ್ಬಸ್, ಏರ್ ಇಂಡಿಯಾ, ಆಪಲ್, ಆರ್ಥರ್ ಡಿ, ಲಿಟಲ್, ಬಜಾಜ್, ಬಾರ್ಕ್ಲೇಸ್, ಕೋಹೆಸಿಟಿ, ಡಾ ವಿನ್ಸಿ, ಡಿಹೆಚ್ಎಲ್, ಫುಲ್ಲರ್ಟನ್, ಫ್ಯೂಚರ್ ಫಸ್ಟ್, ಜಿಇ-ಐಟಿಸಿ, ಗ್ಲೋಬಲ್ ಎನರ್ಜಿ ಮತ್ತು ಎನ್ವಿರಾನ್, ಗೂಗಲ್, ಹೋಂಡಾ ಆರ್&ಡಿ, ಐಸಿಐಸಿಐ-ಲೊಂಬಾರ್ಡ್, ಐಡಿಯಾಫೋರ್ಜ್, ಐಎಂಸಿ ಟ್ರೇಡಿಂಗ್, ಇಂಟೆಲ್, ಜಾಗ್ವಾರ್ ಲ್ಯಾಂಡ್ ರೋವರ್, ಜೆಪಿ ಮೋರ್ಗಾನ್ ಚೇಸ್, ಜೆಎಸ್‌ಡಬ್ಲ್ಯೂ, ಕೋಟಾಕ್ ಸೆಕ್ಯುರಿಟೀಸ್, ಮಾರ್ಷ್ ಮೆಕ್ಲೆನ್ನನ್, ಮಹೀಂದ್ರಾ ಗ್ರೂಪ್, ಮೈಕ್ರಾನ್, ಮೈಕ್ರೋಸಾಫ್ಟ್ ಸೇರಿದಂತೆ ಹಲವು ಆಗಿದೆ ಎಂದು ಐಐಟಿ ಬಾಂಬೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಐಎಎನ್ಎಸ್)