ತಿರುಪತಿಯಿಂದ ಅಯೋಧ್ಯೆ 1 ಲಕ್ಷ ಲಡ್ಡುಗಳ ಗಿಫ್ಟ್
Saturday, January 6, 2024
ಜ.22ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಭಕ್ತಾದಿಗಳಿಗೆ ಹಂಚುವುದಕ್ಕಾಗಿ 1 ಲಕ್ಷ ಲಡ್ಡುಗಳನ್ನು ತಿರುಮಲ ತಿರುಪತಿ ದೇಗುಲದಿಂದ ಅಯೋಧ್ಯೆಗೆ ಕಳುಹಿಸಲಾಗುತ್ತಿದೆ.
ಈ ಕುರಿತು ತಿರುಮಲ ತಿರುಪತಿ ದೇಗುಲ ಆಡಳಿತ ಮಂಡಳಿ (ಟಿಟಿಡಿ) ಮಾಹಿತಿ ನೀಡಿದ್ದು, ಪ್ರತೀ ಲಡ್ಡು 25 ಗ್ರಾಂ ತೂಕವಿರುವಂತೆ ಒಟ್ಟು 1 ಲಕ್ಷ ಲಡ್ಡುಗಳನ್ನು ಮಂದಿರ ಸಮಾರಂಭಕ್ಕಾಗಿ ಕಳುಹಿಸಿಕೊಡುತ್ತಿದ್ದೇವೆ ಎಂದು ತಿಳಿಸಿದೆ.