-->
ಜ್ಯೋತಿಷಿ ಮಾತು ಕೇಳಿ  ದಾವೂದ್‌ಗೆ ಸೇರಿದ 15 ಸಾವಿರ ಬೆಲೆ ಆಸ್ತಿ 2 ಕೋಟಿ ರೂ.ಗೆ ಖರೀದಿ!

ಜ್ಯೋತಿಷಿ ಮಾತು ಕೇಳಿ ದಾವೂದ್‌ಗೆ ಸೇರಿದ 15 ಸಾವಿರ ಬೆಲೆ ಆಸ್ತಿ 2 ಕೋಟಿ ರೂ.ಗೆ ಖರೀದಿ!

ಮುಂಬಯಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ನಾಲ್ಕು ಆಸ್ತಿಗಳನ್ನು ಮಹಾರಾಷ್ಟ್ರದಲ್ಲಿ ಶುಕ್ರವಾರ ಹರಾಜು ಹಾಕಲಾಯಿತು.

 ಈ ಪೈಕಿ ರತ್ನಗಿರಿ ಜಿಲ್ಲೆಯ ಮುಂಬೇಕ್ ಗ್ರಾಮದಲ್ಲಿರುವ ಒಂದು ಆಸ್ತಿಯ ಸರಕಾರಿ ಮೀಸಲು ಬೆಲೆ 15,440 ರೂ. ಮಾತ್ರ. ದಾವೂದ್ ಆಸ್ತಿಯಾಗಿರುವುದರಿಂದ ಹರಾಜು ಕೂಗಲು ಹೆಚ್ಚಿನ ಜನರು ಮುಂದಾಗಲಿಲ್ಲ. ಕೇವಲ ಒಬ್ಬರು ಮಾತ್ರ ಹರಾಜಿನಲ್ಲಿ ಪಾಲ್ಗೊಂಡಿದ್ದರು. ಆದರೆ ಆಶ್ಚರ್ಯಕರವಾಗಿ ಈ ಆಸ್ತಿಯನ್ನು ವಕೀಲರೊಬ್ಬರು ಬರೋಬ್ಬರಿ 2 ಕೋಟಿ ರೂ. ನೀಡಿ ಖರೀದಿಸಿದ್ದಾರೆ.

 'ಗ್ರಾಮದಲ್ಲಿರುವ 170 ಚ.ಅಡಿಯ ಈ ಕೃಷಿ ಜಮೀನನ್ನು 2.01 ಕೋಟಿ ರೂ. ನೀಡಿ ಖರೀದಿಸಿದ್ದೇನೆ. ಸಂಖ್ಯಾಶಾಸ್ತ್ರದ ಪ್ರಕಾರ, ನಮ್ಮ ಜೋತಿಷಿ ಹೇಳಿದಂತೆ ಈ ಮೊತ್ತಕ್ಕೆ ನಾನು ಖರೀದಿ ಮಾಡಿದ್ದೇನೆ. ಭೂಪರಿವರ್ತನೆ ಆದ ಅನಂತರ ಇಲ್ಲಿ ಸನಾತನ ಶಾಲೆಯನ್ನು ನಿರ್ಮಿಸುತ್ತೇನೆ' ಎಂದು ವಕೀಲ ಅಜಯ್ ಶ್ರೀವಾಸ್ತವ ಹೇಳಿದರು. ಈ ಹಿಂದಿನ ಹರಾಜಿನಲ್ಲಿ ಕೂಡ ದಾವೂದ್‌ಗೆ ಸೇರಿದ ಮೂರು ಆಸ್ತಿಗಳನ್ನು ಅಜಯ್ ಖರೀದಿಸಿದ್ದರು.

Ads on article

Advertise in articles 1

advertising articles 2

Advertise under the article