-->
ಜನವರಿ 24 : ಮಂಗಳೂರಿನಲ್ಲಿ ಎಸ್. ವೈ. ಎಸ್‌. ಮೂವತ್ತನೇ ವಾರ್ಷಿಕ ಮಹಾ ಸಮ್ಮೇಳನ

ಜನವರಿ 24 : ಮಂಗಳೂರಿನಲ್ಲಿ ಎಸ್. ವೈ. ಎಸ್‌. ಮೂವತ್ತನೇ ವಾರ್ಷಿಕ ಮಹಾ ಸಮ್ಮೇಳನ



ಮಂಗಳೂರು:  ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್. ವೈ. ಎಸ್) ಮೂವತ್ತು ವರ್ಷಗಳನ್ನು ಪೂರ್ತಿಗೊಳಿಸಿದ ಹಿನ್ನೆಲೆಯಲ್ಲಿ ಅದರ ಮೂವತ್ತನೇ ವಾರ್ಷಿಕ ಮಹಾ ಸಮ್ಮೇಳನವು ಇದೇ ಜನವರಿ 24 ಬುಧವಾರ ಮಂಗಳೂರಿನ ಹೊರವಲಯದ ಅಡ್ಯಾರ್ ನ ಷಾ ಮೈದಾನದಲ್ಲಿ  ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಬಿ ಎಂ ಮತ್ತಾಝ್ ಅಲಿ ತಿಳಿಸಿದರು.


ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ‌ ಮಾತನಾಡಿದ ಅವರು ರಾಜ್ಯದ ಅತೀ ದೊಡ್ಡ ಮುಸ್ಲಿಂ ಯುವಜನ ಬಹುಜನ ಸಂಘಟನೆಯಾದ ಎಸ್.ವೈ. ಎಸ್, ನಾಡಿನ ಯುವಜನತೆಯ ಸರ್ವಾಂಗೀಣ ಅಭಿವೃದ್ಧಿ ಲಕ್ಷವಾಗಿಟ್ಟು 1994 ರಲ್ಲಿ ರಚಿಸಲಾಗಿದೆ.ಈಗಾಗಲೇ ಸಂಘಟನೆಯು ಕಳೆದ ಮೂರು ದಶಕಗಳಲ್ಲಿ ಧಾರ್ಮಿಕ, ಸಾಮಾಜಿಕ, ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸರ್ವಜನರ ಅಭ್ಯುದಯವನ್ನು ಗುರಿಯಾಗಿಸಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಜಾರಿಗೆ ತಂದಿದೆ. ಸಾಮಾಜಿಕ ಸ್ವಾಸ್ಥ್ಯ, ಒಗ್ಗಟ್ಟು ಕೋಮು ಸೌಹಾರ್ದ, ಮುಂತಾದ ಯೋಜನೆಗಳನ್ನು ಹಮ್ಮಿಕೊಂಡು ಪ್ರಬುದ್ಧ ಯುವಸಮೂಹದ ಸೃಷ್ಟಿಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾ ಬಂದಿದೆ. ಮೂವತ್ತನೇ ವಾರ್ಷಿಕದ ಅಂಗವಾಗಿ ಹಮ್ಮಿಕೊಂಡಿದ್ದ ಒಂದು ವರ್ಷದ ಅಭಿಯಾನದ ಉದ್ಘಾಟನೆಯನ್ನು ಕಳೆದ ಜನವರಿ 24 ರಂದು ಶಿವಮೊಗ್ಗದಲ್ಲಿ ನಡೆಸಲಾಗಿದ್ದು ಈ ಮಧ್ಯೆ ಮೂವತ್ತು ಅಂಶ ಕಾರ್ಯ ಯೋಜನೆಗಳನ್ನು ಜಾರಿಗೆ ತರಲಾಗಿದೆ.ಒಂದು ವರ್ಷದ ಅಭಿಯಾನದ ಸಮಾರೋಪವಾಗಿ ಇದೇ ತಿಂಗಳ ಇಪ್ಪತ್ತ ನಾಲ್ಕರಂದು ಮಂಗಳೂರು ಅಡ್ಯಾರ್ ಷಾ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಮ್ಮೇಳನ ನಡೆಯಲಿದೆ  ಸಮ್ಮೇಳನದಲ್ಲಿ ವಿಶ್ವ ವಿಖ್ಯಾತ ವಿದ್ವಾಂಸ,ಭಾರತದ ಗ್ರಾಂಡ್ ಮುಸ್ಲಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ, ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಮುಖ್ಯ ಮಂತ್ರಿ  ಸಿದ್ದರಾಮಯ್ಯ, ಧಾರ್ಮಿಕ ನಾಯಕರಾದ ಸಯ್ಯದ್ ಕುಂಬೋಲ್ ಆಟಕೊಯ ತಂಬಳ್, ಸಯ್ಯದ್ ಖಲೀಲುಲ್ ಬುಖಾರಿ, ಸಯ್ಯದ್ ಕೂರತ್ ತಂಬಳ್, ಝನುಲ್ ಉಲಮಾ ಮಾಣಿ ಉಸ್ತಾದ್, ಪೇರೊಡ್ ಅಬ್ದುಲ್ ರಹ್ಮಾನ್ ಸಖಾಫಿ, ಕರ್ನಾಟಕ ವಿಧನಸಭೆಯ ಅಧ್ಯಕ್ಷ ಯು. ಟಿ. ಖಾದರ್, ಸಚಿವ ಝಮೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಖ್,ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ, ಸಮುದಾಯದ ಧುರೀಣರಾದ ಹಾಜಿ ಯೆನೆಪೋಯ ಅಬ್ದುಲ್ಲ ಕುಖ್, ಹಾಜಿ ಮೊಹಮ್ಮದ್ ಮಸೂದ್ ಹಾಗೂ ಸಮಾಜದ ವಿವಿಧ ಸ್ತರದ ವಿಶಿಷ್ಟ ವ್ಯಕ್ತಿಗಳು ಗಣ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಒಂದು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.


ಪತ್ರಿಕಾ ಗೋಷ್ಠಿಯಲ್ಲಿ SYS ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ ಕೊಳಕೇರಿ  ಮೌಲಾನಾ ಎನ್. ಕೆ.ಎಂ.ಕಾಫಿ ಸಅದಿ ಬೆಂಗಳೂರು (ಕೋಶಾಧಿಕಾರಿ ಸ್ವಾಗತ ಸಮಿತಿ) , ಡಾ. ಎಮ್ಮೆಸ್ಸೆಂ ಝನೀ ಕಾಮಿಲ್ (ಸಂಯೋಜಕರು ಸ್ವಾಗತ ಸಮಿತಿ) ಹಾಜಿ ಶಕೀರ್ ಹೈಸಮ್ (ಪ್ರಧಾನ ಕಾರ್ಯದರ್ಶಿ ಸ್ವಾಗತ ಸಮಿತಿ) , ಮುಹಮ್ಮದ್ ಸಾದಿಕ್ ಮಲೆಬೆಟ್ಟು (ಪ್ರಧಾನ ಕಾರ್ಯದರ್ಶಿ ರಾಜ್ಯ SYS) , ಅಡ್ವಕೆಟ್ ಹಂಝತ್ ಉಡುಪಿ (ಕೋಶಾಧಿಕಾರಿ ರಾಜ್ಯ SYS) ಹಸೈನಾರ್ ಆನೆಮಹಲ್ (ಮಾಧ್ಯಮ ಕಾರ್ಯದರ್ಶಿ ರಾಜ್ಯ SYS) ಅಶ್ರಫ್ ಕಿನಾರ (ಸಂಚಾಲಕರು ಸ್ವಾಗತ ಸಮಿತಿ) ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article