‘ನಿಮ್ಮ ಹೆಸರಿಗೆ ಡ್ರಗ್ಸ್ ಪಾರ್ಸೆಲ್ ಬಂದಿದೆ’ ಎಂದು ನಟಿಗೆ 5 ಲಕ್ಷ ರೂ. ವಂಚನೆ
ಖ್ಯಾತ ನಟಿ ಅಂಜಲಿ ಪಾಟೀಲ್ (Anjali Patil) ಅವರಿಗೆ ಸೈಬರ್ ಖದೀಮರಿಂದ ಬರೋಬ್ಬರಿ 5.79 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ.
‘ನಿಮ್ಮ ಹೆಸರಿನಲ್ಲಿ ಡ್ರಗ್ಸ್ ಪಾರ್ಸೆಲ್ ಬಂದಿದೆ’ ಎಂದು ಹೆದರಿಸುವ ಮೂಲಕ ಸೈಬರ್ ಕ್ರೈಂ ಖದೀಮರು ಈ ನಟಿಗೆ ಮೋಸ ಮಾಡಿದ್ದಾರೆ. ತಮಗೆ ಈ ರೀತಿ ವಂಚನೆ ಆಗಿದೆ ಎಂಬುದು ಅಂಜಲಿ ಪಾಟೀಲ್ ಅವರಿಗೆ ತಡವಾಗಿ ಅರಿವಾಗಿದೆ.
ತಮ್ಮನ್ನು ಪೊಲೀಸರು ಎಂದು ಪರಿಚಯ ಮಾಡಿಕೊಂಡ ಖದೀಮರು ನಟಿಯಿಂದ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದಾರೆ. ದೀಪಕ್ ಶರ್ಮಾ ಎಂಬ ವ್ಯಕ್ತಿಯು ಅಂಜಲಿ ಪಾಟೀಲ್ ಅವರಿಗೆ ಕರೆ ಮಾಡಿ ‘ನಿಮ್ಮ ADHAR ಕಾರ್ಡ್ನೊಂದಿಗೆ ಡ್ರಗ್ಸ್ ಪಾರ್ಸೆಲ್ ಸಿಕ್ಕಿದೆ. ನೀವು ಮುಂಬೈ ಸೈಬರ್ ಪೊಲೀಸರನ್ನು ಸಂಪರ್ಕಿಸಿ’ ಎಂದು ಹೇಳಿದ್ದಾನೆ. ನಂತರ ತಾನು ಮುಂಬೈ ಸೈಬರ್ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಬ್ಯಾನರ್ಜಿ ಎಂಬ ವ್ಯಕ್ತಿ ಅಂಜಲಿಗೆ ಕರೆ ಮಾಡಿದ್ದಾನೆ. ‘ನಿಮ್ಮ ಆಧಾರ್ ಸಂಖ್ಯೆಗೆ LINK ಆಗಿರುವ ಮೂರು ಬ್ಯಾಂಕ್ಗಳಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದೆ. ಅದರ ಪರಿಶೀಲನೆ ಮಾಡಲು ನೀವು ನಮಗೆ 96,525 ರೂಪಾಯಿ ವರ್ಗಾವಣೆ ಮಾಡಬೇಕು’ ಎಂದು ಡಿಮ್ಯಾಂಡ್ ಇಟ್ಟಿದ್ದಾನೆ.
‘ನಿಮ್ಮ ಜೊತೆ ಬ್ಯಾಂಕ್ ಅಧಿಕಾರಿಗಳು ಕೂಡ ಶಾಮೀಲು ಆಗಿದ್ದಾರೆ’ ಎಂದು ನಟಿಗೆ ಹೆದರಿಸಲಾಗಿದೆ. ಕೇಸ್ ಕ್ಲೋಸ್ ಮಾಡಲು 4,83,291 ರೂಪಾಯಿಯನ್ನು ನಟಿಯಿಂದ ಪಡೆದುಕೊಂಡಿದ್ದಾನೆ. ಖದೀಮರು ಹೇಳಿದ್ದನ್ನು ನಿಜ ಎಂದು ನಂಬಿ, ಪೊಲೀಸ್ ಕೇಸ್ ತಪ್ಪಿಸಲು ಅಂಜಲಿ ಪಾಟೀಲ್ ಅವರು ಈ ಹಣವನ್ನು ನೀಡಿದ್ದಾರೆ. ನಂತರ ತಾವು ಮೋಸ ಹೋಗಿರುವುದು ಅವರಿಗೆ ತಿಳಿದುಬಂದಿದೆ. ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.